ಹುಣಸೂರು: ಗ್ರಾಮಗಳಲ್ಲಿ ಆರ್ಥಿಕ ಶಕ್ತಿ ಹಾಗೂ ಸಹಕಾರಿ ಸಂಘ ಬಲಗೊಳಿಸುವಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ತಾಲ್ಲೂಕಿನ ಗಾವಡಗೆರೆ ಹೋಬಳಿ ಕೆರೆಯೂರು ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು. ಹಾಲು ಉತ್ಪಾದರ ಅನುಕೂಲ ಕಾದುಕೊಳ್ಳುವ ಬಗ್ಗೆ ಮೈಮುಲ್ ಹಲವು ಯೋಜನೆ ಜಾರಿಗೊಳಿಸಿದೆ. ಉತ್ಪಾದಕರಿಗೆ ಅನುಕೂಲವಾಗಲು ಪ್ರತಿ ಗ್ರಾಮಗಳಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಿ ರೈತರು ಮನೆ ಬಾಗಿಲಿನಲ್ಲಿ ನೆಮ್ಮದಿಯಿಂದ ಹಾಲು ಹಾಕುವ ವಾತಾವರಣೆ ಸೃಷ್ಟಿಸುವಲ್ಲಿ ಕೈ ಜೋಡಿಸಿದೆ ಎಂದರು.

ಹುಣಸೂರು ತಾಲ್ಲೂಕಿನಲ್ಲಿ 8 ವರ್ಷಗಳ ಹಿಂದೆ 47 ಹಾಲು ಉತ್ಪಾದಕರ ಸಹಕಾರ ಸಂಘ ಇದ್ದುವು, ಈಗ 215 ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಿ ಪ್ರತಿಯೊಂದು ಗ್ರಾಮದಲ್ಲೂ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಸಾಗಿದೆ. ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಿಗೆ ಮೈಮುಲ್ ವತಿಯಿಂದ ರೂಪಿಸಿರುವ ವಿಮೆ, ವಿದ್ಯಾರ್ಥಿ ವೇತನ, ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ಆಹಾರ ಸೇರಿದಂತೆ ಹಲವು ಯೋಜನೆಗಳನ್ನು ಬಳಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬಹುದು ಎಂದರು.

ಅನುದಾನ: ಕೆರೆಯೂರು ಗ್ರಾಮಕ್ಕೆ ಪ್ರಗತಿಪಥ ಯೋಜನೆಯಲ್ಲಿ ₹ 35 ಲಕ್ಷ ವೆಚ್ಚದಲ್ಲಿ ಮುಖ್ಯ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ, ಇದಲ್ಲದೆ ವೆಂಕಟೇಶ್ವರ ದೇವಸ್ಥಾನದ ಅಭಿವೃದ್ಧಿಗೆ ವೈಯಕ್ತಿಕ ಅನುದಾನ ನೀಡಿ ಅಭಿವೃದ್ಧಿಗೆ ಕೈ ಜೋಡಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ.ಎಸ್.ಕುಮಾರ್, ಡೇರಿ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷ ಬಸವಲಿಂಗಪ್ಪ, ನಿರ್ದೇಶಕರಾದ ಗಿರೀಶ್, ವಸಂತ್, ಕುಮಾರ್, ಬಸವರಾಜು, ಸತೀಶ್, ಮಹದೇವ್ ಶೆಟ್ಟಿ, ಪುಟ್ಟರಾಜು, ಶಿಲ್ಪ, ಶ್ವೇತ , ಟಿಎಪಿಸಿಎಂಎಸ್ ಅಧ್ಯಕ್ಷ ಪ್ರೇಮಕುಮಾರ್, ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ, ಬಸವಲಿಂಗಯ್ಯ, ಪಾಪು, ಬಾಬು ಮತ್ತು ಮನೋಹರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.