ಎಚ್.ಡಿ.ಕೋಟೆ: ಪಟ್ಟಣದ ಹೆಬ್ಬಾಳ ಜಲಾಶಯದಲ್ಲಿ ನೀರಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಚ್.ಡಿ. ಕೋಟೆ ತಾಲ್ಲೂಕಿನ ಬೂದನೂರು ಗ್ರಾಮದ ನಿವಾಸಿ ಮಹದೇವಸ್ವಾಮಿ (55), ಪತ್ನಿ ಮಂಜುಳಾ (42), ಪುತ್ರಿ ಹರ್ಷಿತಾ ಮೃತಪಟ್ಟವರು.

ಶನಿವಾರ ಮುಂಜಾನೆ ಜಲಾಶಯಕ್ಕೆ ಆಗಮಿಸಿದ ಮೂವರೂ ಡೆತ್ ನೋಟ್ ಬರೆದು, ದಡದಲ್ಲಿ ಬೈಕ್ ನಿಲ್ಲಿಸಿ, ನೀರಿಗೆ ಹಾರಿದ್ದಾರೆ. ಗ್ರಾಮಸ್ಥರು ಆ ಮಾರ್ಗವಾಗಿ ಸಂಚರಿಸುವಾಗ ಬೈಕ್ ನಿಲ್ಲಿಸಿರುವುದನ್ನು ಗಮನಿಸಿ, ಚಪ್ಪಲಿಗಳೂ ದಡದಲ್ಲಿ ಬಿಟ್ಟಿರುವುದನ್ನು ನೋಡಿ ಪರಿಶೀಲಿಸಿದಾಗ ಬೈಕ್ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ನಂತರ ಅವರು ಪೊಲೀಸರಿಗೆ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು.

‘ಈಚೆಗೆ ಮಹದೇವಸ್ವಾಮಿ ದಂಪತಿಯ ಮೊದಲನೇ ಮಗಳು ಮನೆ ಬಿಟ್ಟು ಹೋಗಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಡೆತ್ ನೋಟ್ ಪರಿಶೀಲನೆ ಮಾಡಿದ ಬಳಿಕ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದರು.
.ಕೋಟಾದಲ್ಲಿ ಆತ್ಮಹತ್ಯೆ: ರಾಜಸ್ಥಾನ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ.ದಲಿತ ಯುವಕನ ಆತ್ಮಹತ್ಯೆ ಪ್ರಕರಣದ ತನಿಖೆಯಾಗಲಿ: ಕೃಷ್ಣಮೂರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.