ಹುಣಸೂರು: ಸಾಲದ ಹೊರೆ ತಾಳಲಾರದೆ ಹುಣಸೂರು ತಾಲ್ಲೂಕಿನ ದಾಸನಪುರ ಗ್ರಾಮದ ಪ್ರಗತಿಪರ ರೈತ ವೆಂಕಟೇಶ (45) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೆಂಕಟೇಶ ಅವರು ಕೃಷಿಯ ಉದ್ದೇಶಕ್ಕೆ ಹನಗೋಡು ಹೋಬಳಿ ಕೇಂದ್ರದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ತನ್ನ ತಾಯಿ ಯಶೋದಮ್ಮ ಅವರ ಹೆಸರಿನಲ್ಲಿ ₹2.50 ಲಕ್ಷ, ತಮ್ಮ ಹೆಸರಿನಲ್ಲಿ ₹ 3 ಲಕ್ಷ ಹಾಗೂ ಕೊಟಕ್ ಮಹೇಂದ್ರ ಬ್ಯಾಂಕ್ನಲ್ಲಿ ಟ್ಯಾಕ್ಟರ್ ಖರೀದಿಗೆ ₹ 10 ಲಕ್ಷ ಸಾಲ ಪಡೆದಿದ್ದರು.

ಎರಡು ವರ್ಷಗಳಿಂದ ಸತತ ಅತಿವೃಷ್ಠಿಯಿಂದ ತಂಬಾಕು ಹಾಗೂ ಇತರೆ ಬೆಳೆ ಕೈ ಸೇರದೆ ಸಾಲದ ಬಾರ ಹೆಚ್ಚಾಗಿತ್ತು. ಮಾರ್ಚ್ ತಿಂಗಳಿಂದಲೇ ಮಳೆ ಹೆಚ್ಚಾದ ಕಾರಣ ತಂಬಾಕು ಸಸಿ ಹಂತದಲ್ಲೇ ಕರಗಿ ಹೋಗಿದ್ದು ಬೇಸಾಯಕ್ಕೆ ಹೂಡಿದ್ದ ಬಂಡವಾಳ ನಷ್ಟವಾಗಿತ್ತು’ ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.