ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಯಪುರ | ಬೆಂಕಿ ರಹಿತ ಆಹಾರ ತಯಾರಿಸುವ ಸ್ಪರ್ಧೆ

Published 3 ಸೆಪ್ಟೆಂಬರ್ 2024, 14:23 IST
Last Updated 3 ಸೆಪ್ಟೆಂಬರ್ 2024, 14:23 IST
ಅಕ್ಷರ ಗಾತ್ರ

ಜಯಪುರ: ಹೋಬಳಿ ವ್ಯಾಪ್ತಿಯ ಹೊಸಹುಂಡಿಯಲ್ಲಿ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ವತಿಯಿಂದ ನಡೆದ ಅಂತರರಾಷ್ಟ್ರೀಯ ಪೋಷಕಾಂಶ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಬೆಂಕಿ ರಹಿತ ಆಹಾರ ತಯಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

20ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಹೊಸಹುಂಡಿ ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯ ಸಹಾಯಕಿ ಅಮೂಲ್ಯ, ಲ್ಯಾಬ್ ಟೆಕ್ನಿಷಿಯನ್ ಅನುಷಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಉತ್ತಮ ಪೋಷಕಾಂಶ ಒಳಗೊಂಡ ಆಹಾರ ತಯಾರಿಸುವ ಬಗ್ಗೆ ತಿಳಿಸಿಕೊಟ್ಟರು.

ಜನಶಿಕ್ಷಣ ಸಂಸ್ಥೆಯ ಭ್ರಮ್ಮಕುಮಾರಿ, ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್‌ನ ಮಾನಿಟರ್ ಅಧಿಕಾರಿ ಅಶ್ವಿತಾ, ಶಿಲ್ಪಾ, ಕಾರ್ತಿಕ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT