ಮೈಸೂರು: ‘ಗಾಂಧಿ ಮತ್ತು ಅಂಬೇಡ್ಕರ್ ಅವರ ಬದುಕು–ಚಿಂತನೆಗಳು ನಮಗೆ ನಿದರ್ಶನವಾಗಬೇಕೆ ಹೊರತು ಪ್ರದರ್ಶನ ಆಗಬಾರದು’ ಎಂದು ಚಿಂತಕ ಶಂಕರ್ ದೇವನೂರು ಹೇಳಿದರು.

ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಭಾನುವಾರ ಆಯೋಜಿಸಿದ್ದ ‘ಯುವಜನತೆಗಾಗಿ ಗಾಂಧಿ ಮತ್ತು ಅಂಬೇಡ್ಕರ್ ಸಿದ್ಧಾಂತಗಳು’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ‘ಅಂಬೇಡ್ಕರ್ ಮತ್ತು ಗಾಂಧೀಜಿ ನಡುವೆ ಸೈದ್ಧಾಂತಿಕ ವೈರುಧ್ಯ ಇರಬಹುದು. ಆದರೆ, ಇಂದು ಬೇಕಾಗಿರುವುದು ಸಮನ್ವಯತೆ. ಗಾಂಧಿ ಸತ್ಯದ ಪರವಾಗಿದ್ದರು. ಆದರೆ, ನಾವು ಇಂದು ಸತ್ಯಕ್ಕೆ ಸಾಕ್ಷಿ ಕೇಳುವ ಕಾಲಘಟ್ಟದಲ್ಲಿದ್ದೇವೆ’ ಎಂದು ವಿಷಾದಿಸಿದರು.

‘ಅಂಬೇಡ್ಕರ್ ದಿನದ 14 ಗಂಟೆ ಕಾಲ ಓದುತ್ತಿದ್ದರು. ಅವರಲ್ಲಿ 50 ಸಾವಿರದಷ್ಟು ಪುಸ್ತಕಗಳಿತ್ತು. ನಾವು ಎಷ್ಟು ಗಂಟೆ ಓದುತ್ತೇವೆ? ನಮ್ಮ ಮನೆಯಲ್ಲಿ ಪುಸ್ತಕ ಎಷ್ಟಿದೆ?’ ಎಂದು ಪ್ರಶ್ನಿಸಿದರು.

‘ಯುವ ಜನತೆಗಾಗಿ ಅಂಬೇಡ್ಕರ್ ತತ್ವಗಳು’ ಎಂಬ ವಿಷಯದ ಕುರಿತು ಸಹಾಯಕ ಪ್ರಾಧ್ಯಾಪಕ ಕೃಷ್ಣಮೂರ್ತಿ ಚಮರಂ ಮಾತನಾಡಿ, ‘ಅಂಬೇಡ್ಕರ್ ಅವರನ್ನು ಕೇವಲ ದಲಿತ ನಾಯಕ ಎಂದು ಬಿಂಬಿಸಲಾಗುತ್ತಿದೆ. ದಲಿತರಿಗೆ ಮೀಸಲಾತಿ ಕಲ್ಪಿಸಿದರು ಎಂಬ ದಾರಿತಪ್ಪಿಸಲಾಗುತ್ತಿದೆ. ಆದರೆ ಅವರು ಎಲ್ಲರಿಗೂ ಮೀಸಲಾತಿ ಕಲ್ಪಿಸಿದ್ದಾರೆ’ ಎಂದರು.

ಉಪನ್ಯಾಸಕಿ ಬಿ.ಎಸ್. ದಿನಮಣಿ, ಚಿಂತಕ ಧನಂಜಯ ಉಲಿಯೂರು ವಿಚಾರ ಮಂಡಿಸಿದರು. ಶಾಂತಲಾ ಕಲಾ ತಂಡದ ಅಧ್ಯಕ್ಷ ವೆಂಕಟರಾಜು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.