ಮೈಸೂರು: ನಗರದಲ್ಲಿ ಶುಕ್ರವಾರ ಗಾಂಧೀಜಿಯ ಸ್ಮರಣೆಯ ಜತೆಗೆ ಅವರ ಗೀತೆಗಳ ಅನುರಣನ ಕೇಳಿಬಂತು. ಗಾಂಧಿ ಜಯಂತಿ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದವು.

ಪುರಭವನದಲ್ಲಿ ಏರ್ಪಡಿಸಿದ್ದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಮೊದಲಿಗೆ ಗಾಂಧೀಜಿ ಅವರ ಗೀತೆಗಳನ್ನು ಹಾಡಲಾಯಿತು. ಬಳಿಕ ಹಿಂದೂ, ಕ್ರೈಸ್ತ, ಮುಸ್ಲಿಮ್ ಹಾಗೂ ಜೈನಧರ್ಮದ ಧರ್ಮಗುರುಗಳು ಆಯಾ ಧರ್ಮಗಳ ಪ್ರಾರ್ಥನಾ ಸಂದೇಶ ಪಠಿಸಿದರು. ಈ ಮೂಲಕ ಸಾರ್ವಜನಿಕರಿಗೆ ಜೀವನವನ್ನು ಎದುರಿಸುವ ಸಂದೇಶ ನೀಡಲಾಯಿತು. ಗಾಂಧೀಜಿ ಅವರ ಆತ್ಮಚರಿತ್ರೆಯ ಕೆಲವು ಆಯ್ದ ಭಾಗಗಳನ್ನು ಈ ಸಂದರ್ಭದಲ್ಲಿ ಓದಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಎಲ್. ನಾಗೇಂದ್ರ, ಎಸ್.ಎ. ರಾಮ ದಾಸ್, ತನ್ವೀರ್ ಸೇಠ್, ಮೇಯರ್ ತಸ್ನೀಂ, ಉಪಮೇಯರ್ ಸಿ. ಶ್ರೀಧರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಡಿಸಿಪಿ ಪ್ರಕಾಶ್ ಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ ಮತ್ತಿತರರು ಉಪಸ್ಥಿತರಿದ್ದರು.

ಸಚಿವರು ಇದಕ್ಕೂ ಮುನ್ನ ಗಾಂಧಿ ಚೌಕದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬರಲು ತಡವಾದ ಕಾರಣ ಸಚಿವರು ಕೆಲಹೊತ್ತು ಕಾದುನಿಂತರು.

ಕೆಎಸ್‌ಒಯುನಲ್ಲಿ ಕಾರ್ಯಕ್ರಮ: ಕರ್ನಾಟಕ ರಾಜ್ಯ ಮುಕ್ತವಿಶ್ವವಿ ದ್ಯಾಲಯದ ಗಾಂಧಿವನದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಇದೇ ವೇಳೆ ಗಾಂಧೀಜಿ ಕುರಿತು ‘ಆನ್ ಲೈನ್ ಕ್ವಿಜ್’ ಅನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕೇತರ ಸಿಬ್ಬಂದಿಗೆ ಏರ್ಪಡಿಸಲಾಯಿತು. 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಅಂದು ಮತ್ತು ಇಂದು ಜಗತ್ತು ಗಾಂಧೀಜಿ ಅವರನ್ನು ಅನುಸರಿಸಿಕೊಂಡು ಬಂದಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಗಾಂಧಿ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗಾಂಧಿ ಅಧ್ಯಯನ ಪೀಠದ ನಿರ್ದೇಶಕಿ ಡಾ.ಆರ್.ಎಚ್.ಪವಿತ್ರಾ, ಕುಲಸಚಿವ ಲಿಂಗರಾಜ
ಗಾಂಧಿ, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷಾ, ಪ್ರೊ.ಅಶೋಕ್ ಕಾಂಬ್ಳೆ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯನಗೌಡ ಪಾಲ್ಗೊಂಡರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡರು.

ಬಿಜೆಪಿ ಕಚೇರಿಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಪುಷ್ಪಾರ್ಚನೆ ಮಾಡಿದರು.

ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ನಗರ ಕಾರ್ಯದರ್ಶಿ ನಂದಕುಮಾರ್, ಮುಖಂಡರಾದ ಎನ್. ಪ್ರದೀಪ್ ಕುಮಾರ್, ಚೇತನ್, ಗೋಕುಲ್ ಗೋವರ್ಧನ್ ಉಪಸ್ಥಿತರಿದ್ದರು.

ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಮುಖಂಡರಾದ ಕೆ.ವಿ.ಮಲ್ಲೇಶ್, ಬಾಲು, ರಾಮು, ಬಾಬು, ಶೈಲೇಂದ್ರ ಪಾಲ್ಗೊಂಡರು.

ದಟ್ಟಗಳ್ಳಿ ಬಡಾವಣೆಯಲ್ಲಿರುವ ಕೌಟಿಲ್ಯ ವಿದ್ಯಾಸಂಸ್ಥೆ ಆವರಣದಲ್ಲಿ ಗಾಂಧಿ ಜಯಂತಿ ಆಯೋಜಿಸಲಾಯಿತು. ಕೌಟಿಲ್ಯ ವಿದ್ಯಾಲಯದ ಅಧ್ಯಕ್ಷ ಆರ್.ರಘು, ಶಿಕ್ಷಣ ತಜ್ಞ ಡಾ.ಪ್ರಕಾಶ್ ಬಾಬು, ಪ್ರಾಂಶುಪಾಲರಾದ ಡಾ.ಎಲ್.ಸವಿತಾ, ಬಿ.ಬಿ.ರಾಧಿಕಾ ಭಾಗವಹಿಸಿದರು.

‘ಗಾಂಧಿಪಥ’: ಜಾಗೃತಿ ಅಭಿಯಾನ
ಮೈಸೂರು: ಬಿಜೆಪಿ ಯುವಮೋರ್ಚಾ ಮೈಸೂರು ನಗರದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ‘ಗಾಂಧಿ ಪಥ’ ವಿಶೇಷ ಸ್ವದೇಶಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.

ಸ್ವದೇಶಿ- ಸ್ವಭೂಷ- ಸ್ವಭಾಷ ಸಂಕಲ್ಪದೊಂದಿಗೆ ಖಾದಿ ವಸ್ತ್ರ ವಿನ್ಯಾಸಕರು ಮತ್ತು ಸ್ವದೇಶಿ ಕರಕುಶಲ ವಸ್ತುಗಳ ತಯಾರಕರನ್ನು ಸನ್ಮಾನಿಸಲಾಯಿತು. ಖಾದಿ ಬ್ಯಾಗ್ ಉಚಿತವಾಗಿ ವಿತರಿಸಲಾಯಿತು.

ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ ಮತ್ತು ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅಜಿತ್ ಹೆಗ್ಡೆ, ದೇಶದಲ್ಲಿ ಹಲವು ರಾಜಕೀಯ ಪಕ್ಷಗಳು, ನಾಯಕರು ಗಾಂಧೀಜಿ ಅವರನ್ನು ಕೇವಲ ರಾಜಕೀಯಕ್ಕಾಗಿ ಬಳಸಿಕೊಂಡರು. ಆದರೆ ಗಾಂಧಿ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಗಾಂಧಿ ಪಥದಲ್ಲಿ ನಡೆಯುತ್ತಿರುವ ಏಕೈಕ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ ಎಂದರು.

ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಧೀರಜ್ ಪ್ರಸಾದ್, ಜಯಶಂಕರ್, ಕಾರ್ಯಕ್ರಮದ ಸಂಚಾಲಕ ಕೆ.ಎಂ.ನಿಶಾಂತ್, ಮೈಸೂರು ನಗರ ಯುವಮೋರ್ಚಾ ಅಧ್ಯಕ್ಷ ಕಿರಣ್ ಗೌಡ, ಯುವಮೋರ್ಚಾ ಉಸ್ತವಾರಿಗಳಾದ ವಾಣೀಶ್, ಸೋಮಸುಂದರ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.