ವರದಿಯನ್ನೇನು ಮಾಡಲಾಗುತ್ತದೆ?
ಸಂಶೋಧನಾ ವರದಿಯನ್ನು ಎನ್‌ಸಿಬಿಐ (ನ್ಯಾಷನಲ್ ಸೆಂಟರ್ ಫಾರ್ ಬಯೊಟೆಕ್ನಾಲಜಿ ಇನ್ಫರ್ಮೇಷನ್) ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಅದನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು. ಓದಿ ತಿಳಿದುಕೊಳ್ಳಬಹುದು. ಇದರಿಂದ ಮೈಸೂರು ವಿಶ್ವವಿದ್ಯಾಲಯಕ್ಕೆ ಹೆಸರು ಬರುತ್ತದೆ. ನಮ್ಮ ವಿಭಾಗದಲ್ಲಿ ಅತ್ಯಾಧುನಿಕ ಪ್ರಯೋಗಾಲಯವಿದ್ದು ಅದನ್ನು ಬಳಸಿಕೊಳ್ಳಲಾಗುವುದು. ಪರಿಣತರ ನೆರವು ಪಡೆಯಲಾಗುವುದು ಎಂದು ಮಾಲಿನಿ ತಿಳಿಸಿದರು.