‘ಸೆಸ್’ ಸಂಗ್ರಹಿಸುವ ಉದ್ದೇಶ
‘ಗಿಗ್ ಕಾರ್ಮಿಕರನ್ನು ಬಳಸಿಕೊಳ್ಳುವ ಸಂಬಂಧಿತ ಸಂಸ್ಥೆಗಳಿಂದ (ಅಗ್ರಿಗೇಟರ್ಸ್) ಶೇ 5ರಷ್ಟು ‘ಸೆಸ್’ ಸಂಗ್ರಹಿಸಿ ಉಳಿದ ಹಣವನ್ನು ಭರಿಸಿ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಲು ಸರ್ಕಾರ ನಿರ್ಧರಿಸಿದೆ. ಅವರಿಗೆ ಭವಿಷ್ಯ ನಿಧಿ, ವಸತಿ, ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ, ಕಾರ್ಮಿಕ ಕೌಶಲಾಭಿವೃದ್ಧಿ ಕಾರ್ಯಕ್ರಮ, ಅಂತ್ಯಸಂಸ್ಕಾರ ಧನ ಸಹಾಯ ಕಲ್ಪಿಸುವುದಕ್ಕೂ ಯೋಜಿಸಲಾಗಿದೆ. ಇದಕ್ಕಾಗಿ ಪ್ರತಿ ವಹಿವಾಟಿನ ಮೇಲೆ ಶೇ 1ರಿಂದ ಶೇ 2 ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.