ಮೈಸೂರು: 'ಕಾಗಿನೆಲೆ ಪೀಠದ ಶ್ರೀಗಳು ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿ ಬೀದಿಗೆ ಇಳಿದರೆ ಅವರ ತಲೆದಂಡ ಆಗುತ್ತದೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಎಚ್ಚರಿಸಿದರು.

'ನೀವು ಸಿದ್ದರಾಮಯ್ಯರ ಕಾಲಾಳಲ್ಲ, ಕಾಂಗ್ರೆಸ್ ಜೀತದಾಳೂ ಅಲ್ಲ. ನೀವು ಸಿದ್ದರಾಮಯ್ಯ ಪರ ಬೀದಿಗೆ ಇಳಿಯಬಾರದು. ರಾಜಕಾರಣ ಮಾಡಿದರೆ ನಿಮ್ಮ ತಲೆದಂಡ ಮಾಡಬೇಕಾಗುತ್ತದೆ' ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ಸಿದ್ದರಾಮಯ್ಯರಿಗೂ ಮಠಕ್ಕೂ ಸಂಬಂಧವಿಲ್ಲ. ಕಾಗಿನೆಲೆ ಪೀಠ ಕುರುಬ ಸಮಾಜದ ಪೀಠವೇ ಹೊರತು ಸಿದ್ದರಾಮಯ್ಯರ ಪೀಠ ಅಲ್ಲ. ಈ ಪೀಠವನ್ನು ಮಾಡಿದ್ದೇ ನಾನು. ಅದರ ಪ್ರಥಮ ಪೀಠಾಧ್ಯಕ್ಷನೂ ನಾನೇ. ಕುರುಬರನ್ನು ಎಸ್.ಟಿ. ಗೆ ಸೇರಿಸುವಂತೆ ನಾವೆಲ್ಲ 350 ಕಿ.ಮೀ. ಪಾದಯಾತ್ರೆ ಮಾಡಿದಾಗ ಅದನ್ನು ಟೀಕಿಸಿದ್ದ ಸಿದ್ದರಾಮಯ್ಯ ಈಗ ನಿಮ್ಮನ್ನು ಛೂ ಬಿಡುತ್ತಾರೆ. ಸಂಕಷ್ಟದಿಂದ ಪಾರಾಗಲು ಕುರುಬರನ್ನು ಗುರಾಣಿಯಾಗಿ ಬಳಸಲು ಹೊರಟಿದ್ದಾರೆ' ಎಂದು ಟೀಕಿಸಿದರು.

'ರಾಜ್ಯ ಸರ್ಕಾರವು ಕುರುಬರನ್ನು ಎಸ್.ಟಿ.ಗೆ ಸೇರಿಸುವ ಪ್ರಸ್ತಾಪವನ್ನು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಕ್ಕೆ ಕಳುಹಿಸಬೇಕಿತ್ತು. ಅದರ ಬದಲು ನೇರ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು ಸರಿಯಲ್ಲ. ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆ' ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.