ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು ನೀಡಿದರೂ ಕ್ರಮಕೈಗೊಂಡಿಲ್ಲ: ಹಳೆಯೂರು ಮಹದೇವು

Published 30 ಏಪ್ರಿಲ್ 2024, 14:39 IST
Last Updated 30 ಏಪ್ರಿಲ್ 2024, 14:39 IST
ಅಕ್ಷರ ಗಾತ್ರ

ನಂಜನಗೂಡು: ‘ತಾಲ್ಲೂಕಿನ ಹೊಸ ಕಡಜೆಟ್ಟಿಯಲ್ಲಿ ಏ.26ರಂದು ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಗರು ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಗ್ರಾಮದ 5 ಮಂದಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ದೂರು ನೀಡಿದರೂ ಹಲ್ಲೆಕೋರರ ಮೇಲೆ ಪೊಲೀಸರು ಕ್ರಮಕೈಗೊಂಡಿಲ್ಲ’ ಎಂದು ಹಳೆಯೂರು ಮಹದೇವು ಅಪಾದಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಮುಖಂಡ ಕೆ.ಮಾರುತಿ ಅವರ ಮಗ ಪುನೀತ್‌ ಹಾಗೂ ಅವನ ಸಹಚರರಾದ ಪ್ರಕಾಶ, ಸುರೇಶ್‌, ಮಹೇಶ್‌, ಸುದೀಪ್‌, ದರ್ಶನ್‌, ಚೇತನ್‌ ಸೇರಿದಂತೆ ಏಳು ಜನರ ಗುಂಪು ಬಿಜೆಪಿ ಬೆಂಬಲಿಗರಾದ ಸಿದ್ದೇಗೌಡ, ಬಸವರಾಜು, ಗುರುಮಲ್ಲೇಶ್‌, ಕೆ.ಸಿ.ಬಸವರಾಜು ಇವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡವರನ್ನು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಯ ಕುರಿತಂತೆ ಪೊಲೀಸರಿಗೆ ದೂರು ನೀಡಿದರೂ, ಆರೋಪಿಗಳ ವಿರುದ್ದ ಕ್ರಮವಹಿಸಿಲ್ಲ’ ಎಂದು ದೂರಿದರು.

‘ಕಾಂಗ್ರೆಸ್‌ ಮುಖಂಡ ಕೆ.ಮಾರುತಿ ಪೊಲೀಸರ ಮೇಲೆ ತನ್ನ ಪ್ರಭಾವ ಬಳಸಿ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಂಡು, ನ್ಯಾಯ ಒದಗಿಸಬೇಕು’ ಎಂದು ಮನವಿ ಮಾಡಿದರು.

ಜಿ.ಎಂ.ಸೋಮಣ್ಣ, ಹೊಸ ಕಡಜೆಟ್ಟಿ ಸಿದ್ದೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT