‘ನಗರದ ಪ್ರಮುಖ ವ್ಯಾಪಾರ ವಹಿವಾಟು ರಸ್ತೆಗಳನ್ನು ಬೀದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದು ಈ ಸಂಬಂಧ ನಗರಸಭೆ ಪೊಲೀಸ್ ಮತ್ತು ಪಿಡಬ್ಯುಡಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಿದೆ. ಶಬ್ಬಿರ್ ನಗರದ ಪ್ರಮುಖ ರಸ್ತೆ ಬಹುತೇಕ ಆಕ್ರಮಿಸಿಕೊಂಡು ಕಟ್ಟಡ ನಿರ್ಮಿಸಿರುವ ಬಗ್ಗೆ ನಗರಸಭೆ ಸದಸ್ಯ ಯೂನಿಸ್ ಗಮನಕ್ಕೆ ತಂದಿದ್ದು ಆ ಭಾಗದಲ್ಲಿಯೂ ತೆರವು ಕಾರ್ಯಾಚರಣೆ ಅತಿ ಶೀಘ್ರದಲ್ಲಿ ನಡೆಯಲಿದೆ’ ಎಂದರು.