ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಪ್ರಮೋದಾ ದೇವಿ ಒಡೆಯರ್‌ ಆಸ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ: ದೂರು

ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು–ಕಾನೂನು ಕ್ರಮಕ್ಕೆ ಮನವಿ
Last Updated 22 ನವೆಂಬರ್ 2022, 5:13 IST
ಅಕ್ಷರ ಗಾತ್ರ

ಮೈಸೂರು: ‘ಆಲನಹಳ್ಳಿಯ ಸರ್ವೇ ನಂ.41ರ ಗಿರಿದರ್ಶಿಸಿ ಎಕ್ಸ್‌ಟೆನ್ಷನ್‌ನಲ್ಲಿ ಮೈಸೂರು ರಾಜಮನೆತನಕ್ಕೆ ಸೇರಿದ ಜಾಗದಲ್ಲಿ ಎನ್‌. ಸೂರ್ಯನಾರಾಯಣ್‌ ಎಂಬುವರು 55 ಗುಂಟೆ ಜಾಗದಲ್ಲಿ ಅತಿಕ್ರಮಣವಾಗಿ ಪ್ರವೇಶಿಸಿ ಅನಧಿಕೃತ ಕಟ್ಟಡ ನಿರ್ಮಿಸುತ್ತಿದ್ದಾರೆ’ ಎಂದು ಮೈಸೂರು ಅರಮನೆಯ ಸಂಪರ್ಕ ಅಧಿಕಾರಿ ಶಿವೇಂದ್ರ ಅರಸ್‌ ಆಲನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆಲನಹಳ್ಳಿ ಸರ್ವೆ ನಂ.41 178 ಎಕರೆ 38 ಗುಂಟೆ ಜಮೀನಿನ ವಿಚಾರವಾಗಿ ಹೈಕೋರ್ಟ್‌ನಲ್ಲಿ ವಿಚಾರ ನಡೆದು ಮಹಾರಾಜರ ಖಾಸಗಿ ಸ್ವತ್ತು ಎಂದು ಘೋಷಿಸಿದೆ.

ಇದಾದ ಬಳಿಕ ಮೈಸೂರಿನ ತಹಶೀಲ್ದಾರ್‌ ಆರ್‌ಟಿಸಿ ಸಲ್ಲಿಸಿದ್ದು, ಸರ್ವೆ ನಂ.41ರಲ್ಲಿ 125 ಎಕರೆ ವಿಸ್ತೀರ್ಣವನ್ನು ‘ಅರಮನೆ ಕಾವಲು ಸ್ವಾಧೀನ’ದಲ್ಲಿ ಇರುತ್ತದೆ ಎಂದು ತೋರಿಸಿದ್ದಾರೆ. ಆದರೆ, ಇದು ಮಹಾರಾಜರ ಖಾಸಗಿ ಸ್ವತ್ತು ಎಂದು ಹೈಕೋರ್ಟ್‌ ತೀರ್ಪಿನ ಅನ್ವಯ, ಅರಮನೆ ಕಾವಲು ತೆಗೆದುಹಾಕುವಂತೆ ಪ್ರಮೋದಾ ದೇವಿ ಅವರು ಮನವಿ ಸಲ್ಲಿಸಿದ್ದರು. 2022ರ ಜೂನ್‌ 13ರಂದು ಈ ವಿಚಾರವಾಗಿ ಅರ್ಜಿ ಸಲ್ಲಿಸಿರುವ ಅವರು, ತಮ್ಮ ಹೆಸರು, ಸರ್ವೆ, ಪೋಡಿ ಹಾಗೂ ದುರಸ್ತಿ ಮಾಡಲು ಕೋರಿರುತ್ತಾರೆ. ಈ ಮಧ್ಯದಲ್ಲಿ ಈ ಸ್ವತ್ತಿನಲ್ಲಿ 55 ಗುಂಟೆ ಜಾಗದಲ್ಲಿ ಎನ್‌.ಸೂರ್ಯ ನಾರಾಯಣ್‌ ಮತ್ತು ಸಹಚರರು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ ವೇಳೆ, ಬೆದರಿಕೆ ಒಡ್ಡಿದ್ದು, ಕೆಲಸ ಮುಂದುವರಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT