ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯನ್ಸ್‌ ಕ್ಲಬ್‌ ಸೇವೆ ಅಭಿನಂದನಾರ್ಹ: ಶಾಸಕ ಹರೀಶ್‌ಗೌಡ

Published 23 ಜುಲೈ 2023, 11:06 IST
Last Updated 23 ಜುಲೈ 2023, 11:06 IST
ಅಕ್ಷರ ಗಾತ್ರ

ಮೈಸೂರು: ‘ಲಯನ್ಸ್‌ ಕ್ಲಬ್‌ನವರು ಸಮಾಜ ಸೇವಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವುದು ಅಭಿನಂದನಾರ್ಹ’ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.

ಇಲ್ಲಿನ ಬೋಗಾದಿ ವರ್ತುಲ ರಸ್ತೆ ಸಮೀಪದ ಕಬಾನಾ ಗಾರ್ಡನ್‌ನಲ್ಲಿ ಭಾನುವಾರ ನಡೆದ ಲಯನ್ಸ್‌ ಕ್ಲಬ್‌ ಆಫ್‌ ಮೈಸೂರು 2023–24ನೇ ಸಾಲಿನ ಪದಗ್ರಹಣ (66ನೇ) ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಅಂಗವಿಕಲರಿಗೆ, ದುರ್ಬಲರಿಗೆ ಹಾಗೂ ಸರ್ಕಾರಿ ಶಾಲೆಗಳಿಗೆ ವಿವಿಧ ರೀತಿಯಲ್ಲಿ ಕ್ಲಬ್‌ ನೆರವಾಗುತ್ತಿದೆ. ಅದು ಯುವಜನರಿಗೆ ಹಾಗೂ ಇತರರಿಗೆ ಪ್ರೇರಣೆ ನೀಡುವಂಥದ್ದಾಗಿದೆ. ನೀವು ಸಮಾಜಕ್ಕೆ ಮಾಡುತ್ತಿರುವ ಸಹಾಯವನ್ನು ಹೆಚ್ಚಿನ ರೀತಿಯಲ್ಲಿ ತಿಳಿಸುವ ಕೆಲಸವಾಗಬೇಕು. ಆಗ, ಮತ್ತಷ್ಟು ಮಂದಿ ಉತ್ತೇಜನಗೊಂಡು ಸೇವಾ ಕಾರ್ಯದಲ್ಲಿ ತೊಡಗುತ್ತಾರೆ’ ಎಂದು ಸಲಹೆ ನೀಡಿದರು.

ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಕ್ಲಬ್‌ನ ಮಾಜಿ ರಾಜ್ಯಪಾಲ ಡಾ.ಜಿ.ಎ.ರಮೇಶ್ ಮಾತನಾಡಿ, ‘ಸ್ವಂತ ಹಣ ವಿನಿಯೋಗಿಸುವ ನಮಗೆ ಸೇವೆಯೇ ಪ್ರಮುಖವಾದುದು. ಸರ್ಕಾರಿ ಶಾಲೆಗಳಿಗೆ ಹೆಚ್ಚು ಸಹಾಯ ಮಾಡಬೇಕು. ಲಕ್ಷಾಂತರ ರೂಪಾಯಿಯನ್ನೇ ವಿನಿಯೋಗಿಸಬೇಕು ಎಂದೇನಿಲ್ಲ, ಕೈಲಾದಷ್ಟನ್ನು ನೀಡಬಹುದು’ ಎಂದು ತಿಳಿಸಿದರು.

‘ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನಾದರೂ ಸಮಾಜಕ್ಕೆ ಕೊಡಬೇಕು. ದಾನ ಮಾಡಿದಷ್ಟೂ ಶ್ರೀಮಂತಿಗೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ನಮ್ಮವರಿಗೋ, ನಮ್ಮ ಕೆಲಸದವರಿಗೋ ಅಥವಾ ಪರಿಚಯದವರಿಗೂ ಸಹಾಯ ಮಾಡುವುದರಲ್ಲಿ ಸ್ವಾರ್ಥ ಇರುತ್ತದೆ. ಆದರೆ, ಲಯನ್ಸ್ ಕ್ಲಬ್‌ನಲ್ಲಿ ಮಾಡುವ ಸೇವೆಯು ನಿಸ್ವಾರ್ಥವಾಗಿರುತ್ತದೆ. ನಾವು ಸೇವಾ ಕಾರ್ಯಕ್ರಮ ಮಾಡಲು ಹೋದಾಗ ಯಾರೂ ಯಾವ ರೀತಿಯಲ್ಲೂ ಅನುಮಾನದಿಂದ ನೋಡುವುದಿಲ್ಲ. ಎಲ್ಲರೂ ಮುಕ್ತವಾಗಿ ಬರಮಾಡಿಕೊಳ್ಳುತ್ತಾರೆ. ಇದು ಈ ಸಂಸ್ಥೆಯ ಮೇಲಿರುವ ಒಳ್ಳೆಯ ಅಭಿಪ್ರಾಯದಿಂದ ಸಾಧ್ಯವಾಗಿದೆ’ ಎಂದು ಹೇಳಿದರು.

ನೂತನ ಪದಾಧಿಕಾರಿಗಳಾಗಿ ಪದಗ್ರಹಣ ಮಾಡಿದ ಬಿ.ಭಾರತಿ (ಅಧ್ಯಕ್ಷೆ), ಬಿ.ಶಿವಣ್ಣ (ಉಪಾಧ್ಯಕ್ಷ), ಬಿ.ಎಲ್.ಗಿರೀಶ್ (ನಿಕಟಪೂರ್ವ ಅಧ್ಯಕ್ಷ, ಎಲ್‌ಸಿಐಎಫ್‌ ಸಂಯೋಜಕ), ಶಿವಕುಮಾರ್‌ (ಕಾರ್ಯದರ್ಶಿ), ಜೆ.ಲೋಕೇಶ್ (ಖಜಾಂಚಿ), ಪಿ.ರಮೇಶ್ (ಆಡಳಿತಾಧಿಕಾರಿ), ಸಿ.ಮೋಹನ್‌ಕುಮಾರ್‌ (ಸದಸ್ಯತ್ವ ಅಧ್ಯಕ್ಷ), ಕೆ.ಎಸ್.ವಿರೂಪಾಕ್ಷ (ಸೇವಾ ಅಧ್ಯಕ್ಷ), ಪಿ.ಎಚ್.ಚಂದ್ರಶೇಖರ್‌ (ಮಾರುಕಟ್ಟೆ ಹಾಗೂ ಸಂವಹನ ಅಧ್ಯಕ್ಷ) ಹಾಗೂ ಪ್ರತಿಮಾ ರಮೇಶ್ (ಜಿಎಸ್‌ಟಿ ಸಂಯೋಜಕ) ಅವರಿಗೆ ಜಿಲ್ಲೆಯ ಮೊದಲ ಉಪ ಗವರ್ನರ್ ಎನ್.ಸುಬ್ರಹ್ಮಣ್ಯ ಪ್ರಮಾಣವಚನ ಬೋಧಿಸಿದರು.

ಪಿಎಸ್‌ಟಿ ಫೋರಂ ಜಿಲ್ಲಾಧ್ಯಕ್ಷ ಎಸ್.ಮತಿದೇವ್‌ಕುಮಾರ್‌ ಕ್ಲಬ್‌ನ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ವೈದ್ಯರ ದಿನಾಚರಣೆ ಅಂಗವಾಗಿ ಬೆಂಗಳೂರಿನ ನೇತ್ರ ತಜ್ಞ ವೈದ್ಯೆ ಡಾ.ಪ್ರೀತಿ ವಿ.ಅವರನ್ನು ಸನ್ಮಾನಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ಬಿ.ಎಲ್.ಗಿರೀಶ್, ಖಜಾಂಚಿ ಜೆ.ಲೋಕೇಶ್, ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಬಿ.ಶಿವಣ್ಣ, ಮಾಜಿ ಅಧ್ಯಕ್ಷ ಪ್ರಭಾಮಂಡಲ, ಶಿವಕುಮಾರ್‌, ಪ್ರತಿಮಾ ರಮೇಶ್ ಹಾಗೂ ಕ್ಲಬ್‌ನ ನಿರ್ದೇಶಕರಾದ ಎನ್.ಟಿ.ಶ್ರೀನಿವಾಸ್, ಎನ್.ರಾಮು, ಶಿವರಾಜು, ಉಮಾಪತಿ ರಾವ್ ಬಿ., ಎಚ್.ಬಿ.ಸುರೇಶ್, ಎಸ್.ಮುಖೇಶ್, ಎನ್.ಎಸ್.ಗೀತಾ ಮೂರ್ತಿ, ಸದಸ್ಯರು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT