ಮೈಸೂರು: ‘ಮೈಸೂರು ನವೋದ್ಯಮ ಪ್ರಯೋಗಶಾಲೆ ಆಗಬೇಕು. ಇಲ್ಲಿನ ಶೈಕ್ಷಣಿಕ ಕ್ಷೇತ್ರವು ಕೈಗಾರಿಕೆ, ಸರ್ಕಾರ ಮತ್ತು ನಾಗರಿಕ ಸಮಾಜದೊಂದಿಗೆ ಹೆಜ್ಜೆ ಹಾಕಬೇಕು’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿವೃತ್ತ ಅಧ್ಯಕ್ಷ ಎಸ್.ಸೋಮನಾಥ್ ಸಲಹೆ ನೀಡಿದರು.

ಇಲ್ಲಿನ ಕ್ರಾಫರ್ಡ್ ಭವನದಲ್ಲಿ ಸೋಮವಾರ ನಡೆದ ಮೈಸೂರು ವಿಶ್ವವಿದ್ಯಾಲಯದ 106ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯವು ಸಂಶೋಧನೆಗೆ ಆದ್ಯತೆ ನೀಡಬೇಕು. ಜಾಗತಿಕ ಮಟ್ಟಕ್ಕೆ ದೇಶದ ತಂತ್ರಜ್ಞಾನ ಬೆಳೆಸಬೇಕು’ ಎಂದರು.

‘ಹವಾಮಾನ ಬದಲಾವಣೆ, ಆರ್ಥಿಕ ಅಭದ್ರತೆ ಮತ್ತು ಸುರಕ್ಷತಾ ಸಮಸ್ಯೆಗಳು ಸವಾಲಾಗಿವೆ. ಬೋಧಕರು, ಎಂಜಿನಿಯರ್ಗಳು, ವಿಜ್ಞಾನಿಗಳು, ಕಲಾವಿದರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಬೇಕು. ವೈಯಕ್ತಿಕ ಲಾಭದ ಲೆಕ್ಕಾಚಾರ ಮುಖ್ಯವಾಗದೇ, ಸಮುದಾಯ ಮತ್ತು ದೇಶದ ಪ್ರಗತಿಯೇ ಆದ್ಯತೆ ಆಗಬೇಕು’ ಎಂದು ಸಲಹೆ ನೀಡಿದರು.

‘ಬಾಹ್ಯಾಕಾಶದಲ್ಲಿ ಚಂದ್ರಯಾನ, ಮಂಗಳಯಾನ, ಆದಿತ್ಯ– ಎಲ್1 ಮೂಲಕ ಇಸ್ರೊ ಸಾಧನೆ ಮಾಡಿದೆ. ವಿಜ್ಞಾನಿಗಳು, ತಂತ್ರಜ್ಞರು ರೂಪುಗೊಳ್ಳುವುದೇ ವಿಶ್ವವಿದ್ಯಾಲಯಗಳಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಅವರು ದೂರದೃಷ್ಟಿಯಿಂದ ಸ್ಥಾಪಿಸಿದ ವಿಶ್ವವಿದ್ಯಾಲಯ ನಾಡನ್ನು ರೂಪಿಸಿದೆ. ದೇಶದ ಸಾಧ್ಯತೆಯನ್ನು ವಿಸ್ತರಿಸಿದೆ’ ಎಂದು ಶ್ಲಾಘಿಸಿದರು.

‘ಬಾಹ್ಯಾಕಾಶದಿಂದ ಸೆಮಿ ಕಂಡಕ್ಟರ್ವರೆಗೆ, ಜೈವಿಕ ತಂತ್ರಜ್ಞಾನದಿಂದ ಶುದ್ಧ ಇಂಧನ ತಯಾರಿಕೆವರೆಗೆ ದೇಶದ ತಂತ್ರಜ್ಞಾನವನ್ನು ಬೆಳೆಸಬೇಕು. ಕೃತಕ ಬುದ್ಧಿಮತ್ತೆ, ಕ್ವಾಂಟಂ ಕಂಪ್ಯೂಟಿಂಗ್, ಬ್ರೇನ್ ಕಂಪ್ಯೂಟರ್, ಸಂಶ್ಲೇಷಣಾತ್ಮಕ ಜೀವವಿಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯಾಗಬೇಕು’ ಎಂದರು.

‘ಆಹಾರ, ಔಷಧ, ವೈದ್ಯಕೀಯ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ನಿಮ್ಮ ಪಾತ್ರವೇನೆಂದು ಗೊತ್ತು ಮಾಡಿಕೊಂಡು ಅದರತ್ತ ಚಿತ್ತ ಹರಿಸಬೇಕು. ಸ್ಪರ್ಧಿಗಳಲ್ಲ ನಾವು ಒಡನಾಡಿಗಳು ಎಂಬ ಮನೋಭಾವ ಇರಬೇಕು. ಮೈಸೂರು ದಸರಾ ಸಂಭ್ರಮದಲ್ಲಿ ಒಂದಾಗುವಂತೆ ಎಲ್ಲರೂ ತಮ್ಮ ಕೊಡುಗೆಯನ್ನು ಸಂಭ್ರಮಿಸಬೇಕು’ ಎಂದು ಹೇಳಿದರು.

‘ಸತ್ಯ, ಅನುಕಂಪ, ಕುತೂಹಲ, ಗುರಿ ಸಾಧನೆಯೇ ಮೌಲ್ಯವಾಗಲಿ. ಭಾರತದ ಸಾಮರ್ಥ್ಯದ ಸಾಕ್ಷಾತ್ಕಾರ ನಿಮ್ಮಂಥ ಪದವೀಧರರಿಂದಲೇ ಆಗಲಿ. ಸಂಪನ್ಮೂಲಗಳು ಸೀಮಿತವಾಗಿರುವುದರಿಮದ ಮಿತವಾಗಿ ಬಳಸಿ. ಕೆಲಸದಲ್ಲಿ ಅಂತಃಕರಣವಿರಲಿ, ದೇಶ– ಸಮುದಾಯಗಳ ನಡುವೆ ಸೇತುವೆ ನೀವಾಗಿ’ ಎಂದು ನುಡಿದರು.

ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಪದವೀಧರರಿಗೆ ಪದಕ ಹಾಗೂ ನಗದು ಬಹುಮಾನ ಪ್ರದಾನ ಮಾಡಿದರು. ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು ಹಾಜರಿದ್ದರು.

ವೈಫಲ್ಯಗಳಿಗೆ ವಿದ್ಯಾರ್ಥಿಗಳು ಹಿಂಜರಿಯದೇ ಕಲಿಕಾ ಪ್ರಕ್ರಿಯೆ ಎಂದು ಪರಿಗಣಿಸಿ ಕಲಿಕೆ ಮುಂದುವರಿಸಬೇಕು. ಜ್ಞಾನವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನೀಡಲು ಶ್ರಮಿಸಬೇಕು
ಥಾವರ್ಚಂದ್ ಗೆಹಲೋತ್ ರಾಜ್ಯಪಾಲ

ಮಹಿಳೆಯರ ಪಾರಮ್ಯ

ಪದವಿ ಪಡೆದ 30966 ಅಭ್ಯರ್ಥಿಗಳಲ್ಲಿ ಶೇ 60ರಷ್ಟು ಮಹಿಳೆಯರೇ ಇದ್ದದ್ದು ಘಟಿಕೋತ್ಸವದ ವಿಶೇಷ! ವಿವಿಧ ವಿಷಯಗಳಲ್ಲಿ 452 ಅಭ್ಯರ್ಥಿಗಳು ಪಿಎಚ್.ಡಿ ಪದವೀಧರರಾದರು. 213 ಅಭ್ಯರ್ಥಿಗಳು ವಿವಿಧ ವಿಭಾಗಗಳಲ್ಲಿ 449 ಚಿನ್ನದ ಪದಕ 197 ನಗದು ಬಹುಮಾನ ಪಡೆದರು. ಇವರಲ್ಲಿ 161 ಮಹಿಳೆಯರೇ ಇದ್ದರು. 3551 ಮಹಿಳೆಯರು ಸೇರಿದಂತೆ ಒಟ್ಟು 5796 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಮತ್ತು 14850 ಮಹಿಳೆಯರು ಸೇರಿದಂತೆ 24721 ಮಂದಿ ಸ್ನಾತಕ ಪದವೀಧರರಾದರು.

‘ಪಿಂಚಣಿ ಕೊಡಲಾಗದ ದುಃಸ್ಥಿತಿ’

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ‘ಪಿಂಚಣಿ ಕೊಡಲಾಗದಂತಹ ದುಃಸ್ಥಿತಿಗೆ ಮೈಸೂರು ವಿಶ್ವವಿದ್ಯಾಲಯ ತಲುಪಿರುವುದು ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು. ‘ವಿಶ್ವವಿದ್ಯಾಲಯದ ಸ್ಥಿತಿಗತಿ ಶುಲ್ಕ ಸಂಗ್ರಹ ಸೇರಿದಂತೆ ಯಾವುದನ್ನೂ ಗಮನಿಸದೇ ಹಾಸನ ಮಂಡ್ಯ ಚಾಮರಾಜನಗರ ಕೇಂದ್ರಗಳನ್ನು ಹೊಸ ವಿಶ್ವವಿದ್ಯಾಲಯಗಳಾಗಿ ವಿಭಜಿಸಲಾಯಿತು. ಪ್ರಚಾರಕ್ಕಾಗಿ ಹೀಗೆ ಮಾಡಲಾಯಿತು’ ಎಂದು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಟೀಕಿಸಿದರು. ‘ಜಾಗತಿಕ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಇರಬೇಕಿದ್ದ ವಿಶ್ವವಿದ್ಯಾಲಯಕ್ಕೆ ₹150 ಕೋಟಿ ಪಿಂಚಣಿ ಹೊರೆಯಿದೆ. ಅಧೀನ ಕಾಲೇಜುಗಳು ನೂರಕ್ಕೂ ಕಡಿಮೆ ಇವೆ. ಇದರೊಂದಿಗೆ ಧಾರವಾಡ ಮಂಗಳೂರು ಶಿವಮೊಗ್ಗ ವಿಶ್ವವಿದ್ಯಾಲಯಗಳೂ ಆರ್ಥಿಕ ಸಂಕಷ್ಟದಲ್ಲಿದ್ದು ಶಾಶ್ವತ ಪರಿಹಾರಕ್ಕೆ ಸರ್ಕಾರ ಕ್ರಮವಹಿಸಲಿದೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.