‘ಮುಖ್ಯಮಂತ್ರಿ ರಾಜಕೀಯ ಜೀವನಕ್ಕೆ ಮರೀಗೌಡನೇ ಕಪ್ಪುಚುಕ್ಕೆಯಾಗಿದ್ದಾನೆ. ಮುಡಾ ನಿವೇಶನದಲ್ಲಿ ಹಲವು ರಾಜಕಾರಣಿಗಳು ಫಲಾನುಭವಿಗಳಿದ್ದಾರೆ. ಅಕ್ರಮವಾಗಿ ನಿವೇಶನ ಪಡೆದವರ ಮೇಲೆ ಕ್ರಮವಾಗಲಿ. ಆದರೆ, ಸಿದ್ದರಾಮಯ್ಯ ಅವರ ವಿರುದ್ಧ ಆಧಾರ ರಹಿತ ಆರೋಪ ಮಾಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ವಿರೋಧ ಪಕ್ಷದವರಿಗೆ ಸಹಿಸಲಾಗದೆ ಪಿತೂರಿ ನಡೆಸುತ್ತಿದ್ದಾರೆ’ಎಂದರು.