ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಕಳಲೆ ಲಕ್ಷ್ಮೀಕಾಂತಸ್ವಾಮಿ ಜಾತ್ರೆ ಸಂಭ್ರಮ

Published 28 ಮಾರ್ಚ್ 2024, 15:56 IST
Last Updated 28 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಕಳಲೆ ಗ್ರಾಮದಲ್ಲಿ ಲಕ್ಷ್ಮೀಕಾಂತಸ್ವಾಮಿ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.

ಗುರುವಾರ ಮುಂಜಾನೆ ದೇವಾಲಯದಲ್ಲಿ ಲಕ್ಷ್ಮೀಕಾಂತಸ್ವಾಮಿ ಉತ್ಸವಮೂರ್ತಿಗೆ ಕ್ಷಿರಾಭಿಷೇಕ, ಫಲ ಪಂಚಾಮೃತ ಅಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಬೆಳಿಗ್ಗೆ 7.53ರಿಂದ 8.21 ಗಂಟೆಯೊಳಗೆ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಶಾಸಕ ದರ್ಶನ್‍ ಧ್ರುವನಾರಾಯಣ ಹಾಗೂ ದೇವಾಲಯದ ಪಾರು ಪತ್ತೇದಾರ್ ಜಯರಾಮ್ ರಥದ ಚಕ್ರಕ್ಕೆ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ರಥದ ಮೇಣಿಯನ್ನು ಶ್ರದ್ಧಾಭಕ್ತಿಯಿಂದ ಎಳೆದು, ರಥಕ್ಕೆ ಹಣ್ಣು, ದವನ ಅರ್ಪಿಸಿ ಪ್ರಾರ್ಥಿಸಿದರು. ರಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಚಲಿಸಿ ಸ್ವಸ್ಥಾನ ಸೇರಿತು.

ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಥವನ್ನು ವಿವಿಧ ಬಗೆಯ ಬಣ್ಣದ ಬಟ್ಟೆ, ಹೂವು ಹಾಗೂ ಬಾವುಟಗಳಿಂದ ಸಿಂಗರಿಸಲಾಗಿತ್ತು. ಉತ್ಸವ ಮೂರ್ತಿಗೆ ವಜ್ರ-ವೈಡೂರ್ಯಗಳಿಂದ ಕೂಡಿದ ಒಡವೆಗಳಿಂದ ಅಲಂಕರಿಸಲಾಗಿತ್ತು. ಗ್ರಾಮಸ್ಥರು ರಥ ಚಲಿಸುವ ಮಾರ್ಗದಲ್ಲಿ ರಂಗೋಲೆ ಬಿಡಿಸಿ, ತಳಿರು ತೋರಣಗಳಿಂದ ಸಿಂಗರಿಸಿದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ರಥೋತ್ಸವದಲ್ಲಿ ಕಾಂಗ್ರೆಸ್ ಕಳಲೆ ಕೇಶವಮೂರ್ತಿ, ಕಳಲೆ ಗ್ರಾ.ಪಂ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಹರೀಶ್, ಸದಸ್ಯರಾದ ಲತಾ ಮಹೇಶ್, ಸಿದ್ದೇಶ್, ಮುಖಂಡರಾದ ಕಳಲೆ ರಾಜೇಶ್, ಮಹದೇವು, ಬಸವಣ್ಣ, ರಾಚನಾಯಕ, ನಗರಸಭಾ ಸದಸ್ಯ ಪ್ರದೀಪ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT