ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ: ಮೋಂಬತ್ತಿ ಹಿಡಿದು ಪ್ರತಿಭಟನೆ

Published : 23 ಆಗಸ್ಟ್ 2024, 15:57 IST
Last Updated : 23 ಆಗಸ್ಟ್ 2024, 15:57 IST
ಫಾಲೋ ಮಾಡಿ
Comments

ಮೈಸೂರು: ಕೋಲ್ಕತ್ತಾದ ಆರ್‌.ಜಿ. ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ‘ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘ’ ಹಾಗೂ ‘ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕ ಸಂಘ’ದ ಸದಸ್ಯರು ಶುಕ್ರವಾರ ಮೋಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಸಮೀಪದ ಯುದ್ಧ ಸ್ಮಾರಕ ಉದ್ಯಾನದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ‘ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ’ಗೆ ಒತ್ತಾಯಿಸಿದರು.

ಸಂಘದ ಪಿ.ಕೆ.ಬಿದ್ದಪ್ಪ ಮಾತನಾಡಿ, ‘ತರಬೇತಿ ನಿರತ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣದಿಂದ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ. ರೋಗಿಗಳ ಜೀವವನ್ನು ಉಳಿಸುವ ವೈದ್ಯರಿಗೇ ದೇಶದಲ್ಲಿ ರಕ್ಷಣೆ ಇಲ್ಲದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಿಸುವ ವಿದ್ಯಾರ್ಥಿನಿಯರ ಸಂಖ್ಯೆಯೂ ಈಚೆಗೆ ಕಡಿಮೆಯಾಗುತ್ತಿದೆ. ಆದ್ದರಿಂದ ಪಶ್ಚಿಮ ಬಂಗಾಳ ಸರ್ಕಾರ ತಕ್ಷಣ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ದೇಶದ ಎಲ್ಲ ರಾಜ್ಯಗಳೂ ವೈದ್ಯರಿಗೆ ಹಾಗೂ ಜನಸಾಮಾನ್ಯರಿಗೆ ರಕ್ಷಣೆ ಕೊಡಬೇಕು’ ಎಂದು ಒತ್ತಾಯಿಸಿದರು.

‘ದೇಶದಾದ್ಯಂತ ದಿನೇ ದಿನೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಇಂಥ ಘಟನೆಗಳು ಮಾನವೀಯತೆಗೆ ಸವಾಲೊಡುತ್ತಿವೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಬಲವಾದ ಕಾನೂನು ಜಾರಿಗೊಳಿಸಬೇಕು’ ಎಂದರು.

ಗೋಪಾಲ್, ಕೆ.ಎಸ್.ಸುರೇಶ್, ರವಿಕುಮಾರ್, ಎನ್.ಎ.ಹರೀಶ್, ಮೊಣ್ಣಪ್ಪ ಮ್ಯಾಥ್ಯೂ, ಬ್ರಿಗೇಡಿಯರ್ ಅಡಪ್ಪ, ಶ್ರೀಧರ್, ಅಯ್ಯರ್, ಬಾಲಸುಬ್ರಹ್ಮಣ್ಯ, ವೇದಾ ರೈ, ರೇಷ್ಮಾ ಶೆಟ್ಟಿ, ಗೀತಾ ಶೆಟ್ಟಿ, ಶಬೀನ್ ವಿಜಯಾಳ್ವ, ಶಬೀನ ಜಲೀಲ್, ಸರೋಜಿನಿ, ಶ್ರೀಧರ್, ಕೆ.ಆರ್.ಭಾಸ್ಕರಾನಂದ, ಕೆ.ಎಂ.ಯಶೋಧಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT