ತಿ.ನರಸೀಪುರ: ಪಟ್ಟಣದಲ್ಲಿ ಕೆಎಸ್ಐಸಿ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಕಾರ್ಮಿಕರ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದೆ.

ಸಂಘದ ಅಧ್ಯಕ್ಷ ಚಂದನ್ ಗೌಡ ಮಾತನಾಡಿ, ‘ಮೈಸೂರು ರೇಷ್ಮೆ ಸೀರೆ ನೂಲು ತೆಗೆಯುವ ಘಟಕವನ್ನು ಮುಚ್ಚಲು ಅವಕಾಶ ನೀಡುವುದಿಲ್ಲ. ಕಾರ್ಮಿಕರಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧದ ಬಗ್ಗೆ ಗಟ್ಟಿ ನಿಲುವಿರಬೇಕು, ಆಗ ಮಾತ್ರವೇ ಹೋರಾಟಕ್ಕೆ ಜಯ ಸಿಗಲಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ರೀಡಾಂಗಣ ನಿರ್ಮಾಣದಿಂದಾಗುವ ತೊಂದರೆಗಳ ಬಗ್ಗೆ ಮಾಹಿತಿ ಕೊರತೆ ಇರಬಹುದು. ಮಾಹಿತಿ ದೊರೆತರೆ ನಿರ್ಮಾಣ ಪ್ರಕ್ರಿಯೆಯನ್ನು ಕೈ ಬಿಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಅನ್ನ ನೀಡುತ್ತಿರುವ ಸಂಸ್ಥೆ ಉಳಿಸಲು ನಾವು ಜತೆ ಇದ್ದೇವೆ’ ಎಂದರು.

ಪುರಸಭಾ ಮಾಜಿ ಸದಸ್ಯ ಅರ್ಜುನ್ ರಮೇಶ್ ಮಾತನಾಡಿ, ‘ಕಾರ್ಖಾನೆಯ ಕಾರ್ಮಿಕರು ಕಳೆದ ಎಂಟು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಸರ್ಕಾರ ಬಗ್ಗದೇ ಮೊಂಡುವಾದ ತೋರುತ್ತಿದೆ. ಮುಂದೆ ತಿ.ನರಸೀಪುರ ಬಂದ್ ಮಾಡಬೇಖಾಗುತ್ತದೆ’ ಎಂದು ಎಚ್ಚರಿದರು.

ಪರಿಸರ ಬಳಗದ ರಾಜ್ಯ ಕಾರ್ಯದರ್ಶಿ ಪರಶುರಾಮೇಗೌಡ, ಪರಿಸರ ಬಳಗ ಮತ್ತು ಗ್ರಾಹಕ ಪರಿಷತ್ತಿನ ಕಾರ್ಯದರ್ಶಿ ಪ್ರಭಾ ನಂದೀಶ್, ಪ್ರೊ.ಕಾಳಚನ್ನೇಗೌಡ, ಶೋಭಾ ಶಿವಕುಮಾರ್. ಶೈಲಜೇಶ್ ಗಾಯಿತ್ರಿ, ಸುಶೀಲಾ, ಭಾಗ್ಯ ಶಂಕರ್, ಗಣೇಶ್, ಅಕ್ಬರ್, ಘಂಟಯ್ಯ, ತಾನ್ಯಾ ಎನ್.ಗುರುಕಾರ್, ತೋಟದಪ್ಪ ಬಸವರಾಜು, ರೈತ ಮುಖಂಡ ಕಿರಗಸೂರು ಶಂಕರ್, ಸಿ.ಡಿ.ವೆಂಕಟೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.