ಮೈಸೂರು: ‘ಕೆ.ಟಿ.ವೀರಪ್ಪ ಅವರು ಕನ್ನಡಕ್ಕೆ ವಿಶ್ವಕೋಶ ಕೊಟ್ಟ ವಿಶ್ವಮಾನವ. ಅವರಿಲ್ಲದಿದ್ದರೆ ಕನ್ನಡಕ್ಕೆ ವಿಶ್ವಕೋಶದ ಭಾಗ್ಯ ಸಿಗುತ್ತಿರಲಿಲ್ಲ’ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಶ್ಲಾಘಿಸಿದರು.

ವೀರಪ್ಪ ಅವರಿಗೆ 90 ವರ್ಷ ತುಂಬಿದ ಅಂಗವಾಗಿ ಅವರ ಅಭಿಮಾನಿಗಳು ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವೀರಪ್ಪ ಅವರದ್ದು, ಚಿರಂತನವಾದ ಮಂದಹಾಸ. ಅವರೊಬ್ಬ ವಿಶ್ವ ಮಾನವ, ಗಾಂಧಿವಾದಿ. ಸದಾ ಹಸನ್ಮುಖಿತಾದ ನಗೆವೀರ’ ಎಂದು ಬಣ್ಣಿಸಿದರು.

‘ಮಾಸದ ಮಂದಹಾಸ’ ಚಿತ್ರಸಂಪುಟ ಬಿಡುಗಡೆ ಮಾಡಿ ಮಾತನಾಡಿದ ಮೈಸೂರು ವಿ.ವಿ.ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ‘ಸ್ಮಿತಪೂರ್ವ ಭಾಷಿ ಎನ್ನುವ ಮಾತು ವೀರಪ್ಪ ಅವರಿಗೆ ಹೆಚ್ಚು ಅನ್ವಯ ಆಗುತ್ತದೆ. ಕುವೆಂಪು, ಗೋಕಾಕ ಸೇರಿದಂತೆ ಅನೇಕ ಮೇರು ಸಾಹಿತಿಗಳೊಡನೆ ಅವರು ಒಡನಾಟ ಹೊಂದಿದ್ದರು. ಅವರದ್ದು ಕಲ್ಮಶವಿಲ್ಲದ ಮನಸ್ಸು. ಹೇಳಬೇಕಾದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ. ಅವರ ಜನ್ಮಶತಮಾನೋತ್ಸವ ಆಚರಣೆ ಆಗಲಿ, ಇನ್ನೊಂದು ಸಂಪುಟ ಬರಲಿ’ ಎಂದು ಆಶಿಸಿದರು.

ಕೆ.ಟಿ.ವೀರಪ್ಪ ದಂಪತಿಯನ್ನು ವಿವಿಧ ಸಂಘ–ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎನ್.ಎಸ್.ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಸಂಚಾಲಕರಾದ ಮಡ್ಡೀಕೆರೆ ಗೋಪಾಲ್, ಪಿ.ಬೋರೇಗೌಡ, ರಾಜೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.