ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ರಾಜ್ಯ ಸರ್ಕಾರದಿಂದ ‘ವಿಶ್ವಕವಿ ಕುವೆಂಪು ಚಿತಾಭಸ್ಮ ಸ್ಮಾರಕ ಭವನ’ ನಿರ್ಮಿಸಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪ್ರತಿನಿಧಿಸುವ ತಿ.ನರಸೀಪುರ ಕ್ಷೇತ್ರ ವ್ಯಾಪ್ತಿಯ, ಮೈಸೂರು ಮತ್ತು ಮಂಡ್ಯ ಜಿಲ್ಲೆ ಗಡಿಯಲ್ಲಿರುವ ಈ ಗ್ರಾಮದಲ್ಲಿ 2024ರ ಜುಲೈ 27ರಂದು ಶಂಕುಸ್ಥಾಪನೆ ನೆರವೇರಿತ್ತು. ಈಗ ಶೇ 80ರಷ್ಟು ಪೂರ್ಣಗೊಂಡಿದೆ.

ಗ್ರಾಮದಲ್ಲಿರುವ ಶ್ರೀರಾಮಕೃಷ್ಣ ಸೇವಾ ಕೇಂದ್ರದ ನಾದಾನಂದನಾಥ ಸ್ವಾಮೀಜಿ ಅವರ ಆಶಯದಂತೆ, ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯೋಜನೆ ಜಾರಿ ಆಗುತ್ತಿದೆ. ಅಗತ್ಯ ಜಾಗವನ್ನು ಅಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ವೈ.ಎನ್. ಶಂಕರೇಗೌಡ ಅವರು ಉಚಿತವಾಗಿ ಒದಗಿಸಿದ್ದಾರೆ.

ಸ್ವಾಮೀಜಿ 2018ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆಗ ₹ 85 ಲಕ್ಷ ಮಂಜೂರು ಆಗಿದ್ದರೂ ಅನುದಾನ ಬಿಡುಗಡೆ ಆಗಿರಲಿಲ್ಲ. ಮತ್ತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಿದ್ದು, 2024ರ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ರವಾನಿಸಲಾಗಿತ್ತು. ಅದಕ್ಕೆ ಅನುಮತಿ ದೊರೆತಿದೆ. ಅತಿಥಿಗಳ ಕೊಠಡಿ, ಸಂಶೋಧಕರಿಗೆ ವಸತಿ ವ್ಯವಸ್ಥೆ, ಗ್ರಂಥಾಲಯ, ಸಭಾಭವನ ನಿರ್ಮಾಣಗೊಳ್ಳಲಿದೆ. ₹ 1.50 ಕೋಟಿ ಮೊತ್ತದಲ್ಲಿ ಯೋಜನೆ ಕೈಗೊಳ್ಳಲಾಗಿದೆ.

ಭವನದಲ್ಲಿ ಕುವೆಂಪು ಅವರ ವಿಶ್ವಮಾನವ ಸಂದೇಶ, ಚಿಂತನೆ ಪಸರಿಸುವ ಕಾರ್ಯ ನಡೆಯಲಿದೆ. ವಿಚಾರಸಂಕಿರಣ, ತರಬೇತಿ ಕಾರ್ಯಕ್ರಮ, ಸಮ್ಮೇಳನ, ಸಂಶೋಧನೆ ಕಾರ್ಯ ನಡೆಸಲೂ ಯೋಜಿಸಲಾಗಿದೆ. ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

‘ನಿರ್ಮಾಣ ಕಾಮಗಾರಿ ಶೇ 80ರಷ್ಟು ನಡೆದಿದೆ. ಉಳಿದ ಕಾಮಗಾರಿಗೆ ಹೆಚ್ಚುವರಿ ಅನುದಾನ ಕೋರಿ ಮನವಿ ಸಲ್ಲಿಸಿದ್ದೇವೆ. ಹೆಚ್ಚುವರಿ ₹1 ಕೋಟಿ ಅನುದಾನ ಸಿಕ್ಕರೆ ಅನುಕೂಲ ಎಂದು ಕೋರಲಾಗಿದೆ’ ಎಂದು ನಾದಾನಂದನಾಥ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶ್ವಮಾನವ ಧರ್ಮದ ಮೊದಲ ಮಹಾಧಿವೇಶನ ಇಂದು

ವಿಶ್ವಮಾನವ ಧರ್ಮ ಜಾಗೃತಿ ವೇದಿಕೆಯಿಂದ ಸೋಮವಾರ (ಡಿ.29) ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಶಾಲೆ ಆವರಣದಲ್ಲಿ ‘ವಿಶ್ವಮಾನವ ಧರ್ಮದ ಮೊದಲ ಮಹಾಧಿವೇಶನ’ ಜರುಗಲಿದೆ. ‘ಕುವೆಂಪು ಅವರ ಮನುಜಮತ ವಿಶ್ವಪಥ ಸರ್ವೋದಯ ಸಮನ್ವಯ ಮತ್ತು ಪೂರ್ಣದೃಷ್ಟಿಯ ತಾತ್ವಿಕ ಪರಿಕಲ್ಪನೆಗಳ ತಹಳಹದಿಯೇ ವಿಶ್ವಮಾನವ ಧರ್ಮವಾಗಿದೆ. ಕೋಮು ದ್ವೇಷ ಹರಡುವ ಈ ಕಾಲದಲ್ಲಿ ಕುವೆಂಪು ಅವರ ವಿಶ್ವಮಾನವ ಧರ್ಮ ಪರಿಕಲ್ಪನೆಯನ್ನು ನೆಲೆಗೊಳಿಸಬೇಕಾಗಿದೆ. ದೇವರು ಧರ್ಮದ ಹೆಸರಿನಲ್ಲಿ ಮೌಢ್ಯ ತುಂಬಿ ದಾರಿ ತಪ್ಪಿಸುವುದರ ವಿರುದ್ಧ ಜಾಗೃತಿ ಮೂಡಿಸಲಾಗುವುದು’ ಎಂದು ನಾದಾನಂದನಾಥ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.