ಮಂಗಳವಾರ, ಜನವರಿ 31, 2023
18 °C

ತಿ.ನರಸೀಪುರದಲ್ಲಿ  ಚಿರತೆ ದಾಳಿ: ಯುವತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ತಿ.ನರಸೀಪುರ ತಾಲ್ಲೂಕಿನ ಎಸ್‌.ಕೆಬ್ಬೆಹುಂಡಿ ಗ್ರಾಮದಲ್ಲಿ ಗುರುವಾರ ಚಿರತೆಯೊಂದು ದಾಳಿ ನಡೆಸಿ ಯುವತಿಯನ್ನು ಕೊಂದು ಹಾಕಿದೆ. 

ಗ್ರಾಮದ ಮೇಘನಾ (22) ಮೃತ ಯುವತಿ. ಸಂಜೆ ವೇಳೆ ಮನೆಯ ಹಿತ್ತಲಿಗೆ ತೆರಳಿದ್ದಾಗ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡ ಅವರನ್ನು ತಿ.ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. 

ಪ್ರತಿಭಟನೆ: ‘ಕಳೆದ ತಿಂಗಳಷ್ಟೇ ಚಿರತೆಯು ಎಂ.ಎಲ್‌.ಹುಂಡಿ ಗ್ರಾಮದ ಚನ್ನಮಲ್ಲು ಎಂಬ ಯುವಕನನ್ನು ಕೊಂದಿತ್ತು. ಇದೀಗ ಯುವತಿಯ ಬಲಿ ಪಡೆದಿದೆ. ನಿರಂತರ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಕ್ರಮವಹಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು. 

ಸ್ಥಳಕ್ಕೆ ಆಗಮಿಸಿ ಡಿವೈಎಸ್‌ಪಿ ಗೋವಿಂದರಾಜು, ಪಿಎಸ್ಐ ತಿರುಮಲ್ಲೇಶ್, ಸಿಬ್ಬಂದಿ ಡಾ.ಭಾರತಿ, ರೇವಣ್ಣ ಗ್ರಾಮಸ್ಥರ ಮನವಿ ಆಲಿಸಿದರು. ಚಿರತೆಯು ಗ್ರಾಮದ ಹೊರವಲಯದ ರಸ್ತೆಯಲ್ಲಿ ಓಡಾಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು