ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸುರು: ಗದ್ದೆ ಬಯಲಿನಲ್ಲಿ ಚಿರತೆ, ತೋಳ ಪ್ರತ್ಯಕ್ಷ | ರೈತರಲ್ಲಿ ಆತಂಕ

Published 29 ಆಗಸ್ಟ್ 2024, 14:37 IST
Last Updated 29 ಆಗಸ್ಟ್ 2024, 14:37 IST
ಅಕ್ಷರ ಗಾತ್ರ

ಹುಣಸುರು: ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದ ಗದ್ದೆ ಬಯಲಿನಲ್ಲಿ ಚಿರತೆ ಮತ್ತು ತೋಳದ ಹೆಜ್ಜೆ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮೂಡಿದೆ ಎಂದು ಗ್ರಾಮದ ನಿವಾಸಿ ಚೆಲುವರಾಜ್ ತಿಳಿಸಿದ್ದಾರೆ.

ಗ್ರಾಮದ ಹೊರ ವಲಯದ ಲಕ್ಷ್ಮಣತೀರ್ಥ ಅಚ್ಚುಕಟ್ಟು ಪ್ರದೇಶದ ಗದ್ದೆ ಬಯಲಿಗೆ ಗುರುವಾರ ಬೆಳಿಗ್ಗೆ ಕೃಷಿ ಮಹಿಳೆಯರು ಭತ್ತ ನಾಟಿ ಮಾಡಲು ತೆರಳಿದಾಗ ಗದ್ದೆಯ ಬದುವಿನಲ್ಲಿ ಅಲ್ಲಲ್ಲಿ ಚಿರತೆ ಮತ್ತು ತೋಳ ನಡೆದಾಡಿದ ಹೆಜ್ಜೆ ಗುರುತು ಗೋಚರವಾಗಿದೆ. ಇದರಿಂದ ಆತಂಕಗೊಂಡ ಕೃಷಿಕರು ಗದ್ದೆಯಲ್ಲಿ ಕೆಲಸ ನಿರ್ವಹಿಸದೆ ಹಿಂದಿರುಗಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಬೋನು ಇಟ್ಟು ಸೆರೆಹಿಡಿಯುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT