ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಕ್ಷಿಣ ಭಾರತದ ಪ್ರವಾಸೋದ್ಯಮ ಕೇಂದ್ರಬಿಂದುವಾಗಲಿ: ಸಂಸದ ಯದುವೀರ್

Published : 8 ಸೆಪ್ಟೆಂಬರ್ 2024, 13:58 IST
Last Updated : 8 ಸೆಪ್ಟೆಂಬರ್ 2024, 13:58 IST
ಫಾಲೋ ಮಾಡಿ
Comments

ಮೈಸೂರು: ‘ಮೈಸೂರು ನಗರವು ದಕ್ಷಿಣ ಭಾರತದ ಪ್ರವಾಸೋದ್ಯಮದ ಕೇಂದ್ರಬಿಂದುವಾಗಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಉದ್ಯಮಿಗಳ ಕಾರ್ಯ ಪ್ರಮುಖವಾದುದು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡಯರ್‌ ಅಭಿಪ್ರಾಯಪಟ್ಟರು‌. 

ಇಲ್ಲಿ ಈಚೆಗೆ ‘ಟ್ರಿಪ್‌ಡೋರ್’ ಟ್ರಾವಲ್ಸ್ ಸಂಸ್ಥೆಯ ಉದ್ಘಾಟನೆ ಹಾಗೂ ಲೋಗೊ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಬಹಳಷ್ಟು ಅಭಿವೃದ್ಧಿ ಆಗಬೇಕು’ ಎಂದರು.

ಮೈಸೂರು ಸಂಘ–ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಸ್ಕಾಲ್ ಇಂಟರ್‌ನ್ಯಾಷನಲ್ ಮೈಸೂರು ವಿಭಾಗದ ಅಧ್ಯಕ್ಷ ಸಿ.ಎ.ಜಯಕುಮಾರ್, ಮೈಸೂರು ಯೋಗ ಫೆಡರೇಶನ್‌ ಅಧ್ಯಕ್ಷ ಶ್ರೀಹರಿ ಮಾತನಾಡಿದರು.

ಪ್ರವಾಸಿ ಮಾರ್ಗದರ್ಶಕ ಎಸ್.ಆರ್.ಪ್ರಸಾದ್ ಹಾಗೂ ಪರ್ವತಾರೋಹಿ ಡಾ.ಉಷಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಮಹಾಜನ ಪಿ.ಜಿ. ಕೇಂದ್ರದ ನಿರ್ದೇಶಕ ಸಿ.ಕೆ.ರೇಣುಕಾರ್ಯ, ಟ್ರಿಪ್‌ಡೋರ್ ಸಂಸ್ಥೆಯ ಸಂಸ್ಥಾಪಕ ಅಂಜಲಿ ಸಮರ್ಥ್, ಸಹ ಸಂಸ್ಥಾಪಕ ಸಮರ್ಥ್ ವೈದ್ಯ, ನಟಿ ಶ್ವೇತಾ ಆರ್. ಪ್ರಸಾದ್, ವಿಪ್ರ ಪ್ರೊಫೆಷನಲ್ ಫೋರಂ ಅಧ್ಯಕ್ಷ ಶ್ರೀನಿವಾಸ್ ಭಾಷ್ಯಂ, ಟ್ರಿಪ್‌ಡೋರ್‌ನ ಸೇಲ್ಸ್ ಡೈರೆಕ್ಟರ್ ಮೊಹಮದ್ ಸರ್ಫರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT