ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರು ಮುಂದೆ ಬರಬೇಕು: ತನಿಷ್ಕಾ ಮೂರ್ತಿ

Published 29 ಮಾರ್ಚ್ 2024, 5:27 IST
Last Updated 29 ಮಾರ್ಚ್ 2024, 5:27 IST
ಅಕ್ಷರ ಗಾತ್ರ

ಮತದಾನದ ಹಕ್ಕಿಗಾಗಿ ಹಿಂದೆಲ್ಲಾ ನಮ್ಮ ಹಿರಿಯರು ಹೋರಾಡಿದ್ದಾರೆ. ಹಕ್ಕು ಸಿಕ್ಕಿರುವಾಗ ಬಳಸಿಕೊಳ್ಳಲು ಹಿಂಜರಿಯಬಾರದು. ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇ 70ರಷ್ಟು ಮಾತ್ರವೇ ಮತದಾನ ಆಗಿದೆ. ಶೇ 30ರಷ್ಟು ಮಂದಿ ದೂರ ಉಳಿದದ್ದೇಕೆ? ಮತದಾನದ ಪ್ರಮಾಣ ಜಾಸ್ತಿಯಾಗಬೇಕು.

ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ಎಂಜಿನಿಯರಿಂಗ್‌ ಓದುತ್ತಿರುವ ನಾನು ಇದೇ ಮೊದಲ ಬಾರಿಗೆ ಮತ ಹಕ್ಕು ಚಲಾಯಿಸಲು ಉತ್ಸುಕಳಾಗಿದ್ದೇನೆ. ನನ್ನ ವಾರಿಗೆಯ ಎಲ್ಲರೂ ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದರೆ ಮತ ಹಾಕಬೇಕು. ಯುವಜನರು ಚುನಾವಣೆಯಿಂದ ದೂರ ಉಳಿಯುವುದು ಸರಿಯಲ್ಲ.

ಆಸೆ–ಆಮಿಷಗಳಿಗೆ ಬಲಿಯಾಗದೇ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿ ಮತವೂ ಮೌಲ್ಯಯುತವಾದುದು. ಅದನ್ನು ಚಲಾಯಿಸದಿದ್ದರೆ ಪ್ರಯೋಜನ ಇರುವುದಿಲ್ಲ. ಆದ್ದರಿಂದ ನಾನು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಪ್ರಜಾ‍ಪ್ರಭುತ್ವದಲ್ಲಿ ಒಳ್ಳೆಯ ಸರ್ಕಾರಕ್ಕಾಗಿ ಎಲ್ಲರೂ ಮತದಾನ ಮಾಡಬೇಕು. ಯುವಜನರು ಸಾಮಾಜಿಕ ಮಾಧ್ಯಮ ಬಳಸಿಕೊಂಡು ಇತರರಿಗೂ ಮತದಾನಕ್ಕೆ ಪ್ರೇರಣೆ ನೀಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

–ತನಿಷ್ಕಾ ಮೂರ್ತಿ, ರೂಪದರ್ಶಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT