ಮಾನವ –ವನ್ಯಪ್ರಾಣಿ ಸಂಘರ್ಷ ತಡೆಗೆ ಎಷ್ಟು ರೈಲು ಬ್ಯಾರಿಕೇಡ್ ಅಳವಡಿಸಬೇಕು ಎಂಬುದರ ವರದಿ ತಯಾರಿಸಲಾಗುತ್ತಿದ್ದು ಹಣ ನೀಡಲು ಮುಖ್ಯಮಂತ್ರಿ ಸಿದ್ಧವಿದ್ದಾರೆ
ಈಶ್ವರ ಖಂಡ್ರೆ ಅರಣ್ಯ ಸಚಿವ
ಸಚಿವರಿಗೆ ಶಾಸಕರ ಮನವಿ
‘ಆದಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಶೀಘ್ರ ಕ್ರಮ ವಹಿಸಬೇಕು. ಈ ಭಾಗದಲ್ಲಿ ಆನೆ ಹುಲಿ ದಾಳಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು ಅದನ್ನು ತಪ್ಪಿಸಲು ಬೇಕಾದ ಯೋಜನೆಗಳನ್ನು ರೂಪಿಸಬೇಕು. ಅರಣ್ಯದಂಚಿನಲ್ಲಿ 50 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅವಶ್ಯಕತೆ ಇದ್ದು ಆ ಕಾಮಕಾರಿ ಮಾಡಿಸುವಂತೆ ಸಚಿವರನ್ನು ಕೋರಲಾಗಿದೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ‘ಆದಿವಾಸಿಗಳಿಗೆ ಬಿಡುಗಡೆಯಾಗುವ ಅನುದಾನ ನೇರವಾಗಿ ಅವರಿಗೆ ತಲುಪುವಂತೆ ಯೋಜನೆ ರೂಪಿಸಬೇಕು’ ಎಂದು ಕೋರಿದರು.