ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜ ಕ್ಷೇತ್ರ: ಧರ್ಮಶ್ರೀ ಬಳಿ ₹1.43 ಕೋಟಿ ಮೌಲ್ಯದ ಚಿನ್ನಾಭರಣ!

Last Updated 13 ಏಪ್ರಿಲ್ 2023, 15:58 IST
ಅಕ್ಷರ ಗಾತ್ರ

ಮೈಸೂರು: ನರಸಿಂಹರಾಜ ಕ್ಷೇತ್ರದಿಂದ ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಧರ್ಮಶ್ರೀ ₹1.87 ಕೋಟಿ ಚರಾಸ್ತಿ ಹಾಗೂ ₹4.02 ಕೋಟಿ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಸರ್ಕಾರಕ್ಕೆ ₹3.70 ಲಕ್ಷ ಬಾಕಿ (ಜಿಎಸ್‌ಟಿ ಬಾಕಿ) ಪಾವತಿಸಬೇಕಿದೆ. ₹1.67 ಕೋಟಿ ಸಾಲವನ್ನೂ ಅವರು ಮಾಡಿದ್ದಾರೆ.

ಎಲ್‌ಎಲ್‌ಬಿ ಪದವೀಧರೆಯಾದ 35 ವರ್ಷ ವಯಸ್ಸಿನ ಅವರು, ರಾಜೀವ್‌ ನಗರ 2ನೇ ಹಂತದ ನಿವಾಸಿಯಾಗಿದ್ದಾರೆ. ಫೇಸ್‌ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಂ ಮೊದಲಾದ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ಹೊಂದಿದ್ದಾರೆ. ತಮ್ಮ ಕೈಯಲ್ಲಿ ₹50 ಸಾವಿರ ನಗದು ಇದೆ ಹಾಗೂ ಪತಿ ಭೈರವ್‌ಸಿಂಗ್ ತಿವಾರಿ ಬಳಿ ₹25 ಸಾವಿರ ಇದೆ ಎಂದು ತಿಳಿಸಿದ್ದಾರೆ.

7 ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ. ಐಸಿಐಸಿಐ ಬ್ಯಾಂಕ್‌ನಲ್ಲಿ ₹5.57 ಲಕ್ಷ ಇಟ್ಟಿದ್ದಾರೆ. ಅವರ ಬಳಿ 8 ವಾಹನಗಳಿದ್ದು, ಅವುಗಳಲ್ಲಿ 4 ದ್ವಿಚಕ್ರವಾಹನಗಳು ಮತ್ತು ಉಳಿದವು ಕಾರ್‌ಗಳು (ಮಾರುತಿ ವ್ಯಾಗನಾರ್, ಫೋಕ್ಸ್‌ವ್ಯಾಗಲ್‌ ಪೋಲೊ, ಸ್ಕೋಡ ರ‍್ಯಾಪಿಡ್, ಹುಂಡೈ ಕ್ರೆಟಾ ಕಾರ್‌ಗಳಿವೆ). ಅವರ ಪತಿ ಹೆಸರಿನಲ್ಲಿ ಸ್ವಿಫ್ಟ್‌ ಹಾಗೂ ಹುಂಡೈ ವರ್ನ ಕಾರಿದೆ ಮತ್ತು ಒಂದು ದ್ವಿಚಕ್ರವಾಹನ ಇದೆ. ₹42.32 ಲಕ್ಷ ಸಾಲ ಹೊಂದಿದ್ದಾರೆ.

ಧರ್ಮಶ್ರೀ ₹1.43 ಕೋಟಿ ಮೌಲ್ಯದ 2,368.8 ಗ್ರಾಂ. ಚಿನ್ನಾಭರಣ ಇಟ್ಟಿದ್ದಾರೆ. ಪತಿ ಬಳಿ 46.80 ಗ್ರಾಂ. ಚಿನ್ನಾಭರಣವಿದೆ. ಅವರು ಹೊಂದಿರುವ ಕೃಷಿ ಭೂಮಿಯ ಮೌಲ್ಯ ₹2.15 ಕೋಟಿ ಎಂದು ತಿಳಿಸಿದ್ದಾರೆ. ವ್ಯಾಪಾರ ಹಾಗೂ ವೃತ್ತಿ ತಮ್ಮ ಆದಾಯದ ಮೂಲಗಳಾಗಿವೆ ಎಂದು ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT