ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಅವ ರಿಗೆ ನೀಡಿರುವ 14 ನಿವೇಶನಗಳನ್ನು ವಾಪಸ್ ಪಡೆಯ ಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಮುಡಾ ಆಯುಕ್ತ ರಘುನಂದನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅಬ್ರಹಾಂ, 'ಮೈಸೂರಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464 ರಲ್ಲಿ 2001ರಲ್ಲಿಯೇ ಮುಡಾ ನಿವೇಶನಗ ಳನ್ನು ರಚಿಸಿ, ನಂತರದಲ್ಲಿ 19 ಫಲಾನು ಭವಿಗಳಿಗೆ ಹಂಚಿದೆ. 2004ರಲ್ಲಿ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅದೇ ಜಮೀನನ್ನು ಖರೀದಿಸಿದ್ದಾರೆ. ಆ ಖರೀದಿಯೇ ಅಕ್ರಮವಾಗಿರುವುದರಿಂದ, ಅವರಿಗೆ ಬದಲಿ ನಿವೇಶನ ನೀಡಲು ಅವಕಾಶವೇ ಇಲ್ಲ. ಹೀಗಾಗಿ ಮುಡಾ ದಿಂದ ಹಂಚಿಕೆಯಾಗಿರುವ ನಿವೇಶನಗಳನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದೇನೆ’ ಎಂದರು.
‘ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ ನೀಡುವ ಸಂಬಂಧ ನಡೆದಿದ್ದ ಮುಡಾ ಸಭೆಯಲ್ಲಿ ಅಂದಿನ ಶಾಸಕ ಡಾ. ಯತೀಂದ್ರ ಅವರೂ ಇದ್ದರು’ ಎಂದರು.
'ಮುಡಾ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಗೆ ಚರ್ಚೆಗೆ ಸಿದ್ಧ. ಕಾಂಗ್ರೆಸ್ ನಾಯಕರು ಸಮಯ ಕೊಡಿಸುತ್ತಾರೆಯೇ’ ಎಂದರು.
ತಮ್ಮನ್ನು ಬ್ಲಾಕ್‌ಮೇಲರ್ ಎಂದು ಕರೆ ದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿ ಯಿಸಿ ‘ಈ ಹಿಂದೆ ಬಿ.ಎಸ್.ಯಡಿಯೂ ರಪ್ಪ, ಜಗದೀಶ ಶೆಟ್ಟರ್ ವಿರುದ್ಧ ದಾಖಲೆ ಗಳನ್ನು ಬಿಡುಗಡೆ ಮಾಡಿದ್ದಾಗ ಅದೇ ಸಿದ್ದ ರಾಮಯ್ಯ ಸದನದಲ್ಲೇ ನನ್ನ ಹೆಸರು ಹೇಳಿ ಬೆನ್ನು ತಟ್ಟಿದ್ದರು. ಈಗ ಬ್ಲಾಕ್‌ಮೇಲರ್ ಆದೆನೇ' ಎಂದು ಪ್ರಶ್ನಿಸಿದರು.
‘ನನ್ನ ದೂರು ಆಧರಿಸಿ ರಾಜ್ಯಪಾಲರು ಮುಖ್ಯಮಂತ್ರಿಗೆ ನೋಟಿಸ್ ನೀಡಿದ್ದಾರೆ. ಪ್ರಾಸಿಕ್ಯೂಶನ್‌ಗೆ ಅನುಮತಿ ಸಿಗುವ ನಿರೀಕ್ಷೆ ಇದೆ. ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸುತ್ತೇನೆ’ ಎಂದರು.
‘ಮೂರೂ ಪಕ್ಷದವರು ನಿವೇಶನ ಪಡೆದಿದ್ದಾರೆ’
ಮೈಸೂರು: ‘ ಕೇವಲ ಸಿದ್ದರಾಮಯ್ಯ ಮಾತ್ರವಲ್ಲ, ಮೂರು ಪಕ್ಷದವರೂ ಮುಡಾದಲ್ಲಿ ನಿವೇಶನ ಪಡೆದಿದ್ದಾರೆ. ಜೆಡಿಎಸ್‌ನವರೇ ಹೆಚ್ಚಿದ್ದಾರೆ. ಎಲ್ಲವೂ ತನಿಖೆಯಾಗಲಿ ಪ್ರಕರಣವನ್ನು ಸಿಬಿಐಗೆ ವಹಿಸಿ ಸತ್ಯಾಂಶ ಹೊರತೆಗೆಯಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
‘ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಡಾದಿಂದ ಬೇರೆಡೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತೆ ಅದೇ ಜಾಗದಲ್ಲಿ ವಕ್ಕರಿಸಿ ರಾತ್ರಿಯಿಡೀ ದಾಖಲೆಗಳನ್ನು ತಿದ್ದುತ್ತಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಹತ್ವದ ದಾಖಲೆಗಳನ್ನು ಈಗಾಗಲೇ ವಿಮಾನದಲ್ಲಿ ಹೊತ್ತೊಯ್ದಿದ್ದಾರೆ. ಈಗ ಉಳಿದ ದಾಖಲೆಗಳನ್ನು ಹಾಳುಗೆಡವುತ್ತಿದ್ದು, ಅದಕ್ಕೆಂದೇ ಮುಡಾದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಕಿತ್ತು ಹಾಕಲಾಗಿದೆ’ ಎಂದು ಆರೋಪಿಸಿದರು.
‘ದಾಖಲೆ ತಿದ್ದಲೆಂದೇ ತಮಗೆ ಬೇಕಾದವರನ್ನು ಆಯುಕ್ತರ ಜಾಗಕ್ಕೆ ತಂದು ಕೂರಿಸಿದ್ದಾರೆ. ಹೀಗಿರುವಾಗ ದೇಸಾಯಿ ಆಯೋಗ ಬಂದು ಏನು ತನಿಖೆ ಮಾಡಲು ಸಾಧ್ಯ?’ ಎಂದು ಪ್ರಶ್ನಿಸಿದರು.
ಪಾದಯಾತ್ರೆ ಹೆಸರಿನಲ್ಲಿ ಮಾನ ಹರಾಜು: ‘ಪಾದಯಾತ್ರೆ, ಜನಾಂದೋಲನದ ಹೆಸರಿನಲ್ಲಿ ಮೂರೂ ಪಕ್ಷಗಳು ರಾಜ್ಯದ ಮಾನ ಹರಾಜು ಮಾಡುತ್ತಿದ್ದು, ಸಾರ್ವಜನಿಕ ಹಿತಾಸಕ್ತಿಗಿಂತ ಕೌಟುಂಬಿಕ ಹಿತಾಸಕ್ತಿಯೇ ಹೆಚ್ಚಾಗಿದೆ’ ಎಂದು ಅವರು ಟೀಕಿಸಿದರು.
ಮುಡಾ ಹಗರಣಕ್ಕೂ ಸಿದ್ದರಾಮಯ್ಯನವರಿಗೂ ಸಂಬಂಧವೇ ಇಲ್ಲ. ಹಗರಣ ಸಾಬೀತಾ ದರೆ ಬಸವರಾಜ ಬೊಮ್ಮಾಯಿ, ಅಂದಿನ ಮುಡಾ ಅಧ್ಯಕ್ಷ ಜೈಲಿಗೆ ಹೋಗಬೇಕಾಗುತ್ತದೆಎನ್.ಚಲುವರಾಯಸ್ವಾಮಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.