ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ವರ್ಷದ ನಂತರ ಪಿಎಚ್‌ಡಿ ಕನಸು ನನಸು: ಹಂಸಲೇಖ

Published 19 ಅಕ್ಟೋಬರ್ 2023, 5:50 IST
Last Updated 19 ಅಕ್ಟೋಬರ್ 2023, 5:50 IST
ಅಕ್ಷರ ಗಾತ್ರ

ಮೈಸೂರು: ‘ ಪಿಎಚ್‌ಡಿ ಪಡೆಯುವ ಕನಸು 18 ವರ್ಷಗಳ ನಂತರ ನನಸಾಗಿದೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹರ್ಷ ವ್ಯಕ್ತಪಡಿಸಿದರು.

ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬುಧವಾರ ‘ದೇಸಿ ಸಂಗೀತ: ಐದನಿ– ಸರಿಗಮಪದನಿ– ಆರಂಭ’ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ‌ಮಾತನಾಡಿದರು. ‘18 ವರ್ಷದಿಂದ ಪಿಎಚ್‌ಡಿ ಮಾಡಬೇಕೆಂದು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಹೋಗುತ್ತಿದ್ದೆ. ಯಾರೂ ನನ್ನನ್ನು ವಿದ್ಯಾರ್ಥಿಯಂತೆ ನೋಡಲಿಲ್ಲ. ಯಾರೋ ಸಿನಿಮಾದವನು ಬಂದಿದ್ದಾನೆಂದು ಸಾಗಿಹಾಕುತ್ತಿದ್ದರು. ಕಡೆಗೆ ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯವು ಅವಕಾಶ ನೀಡಿತು’ ಎಂದು ಹರ್ಷ ವ್ಯಕ್ತಪಡಿಸಿದರು.

‘ಈ ಸಂಶೋಧನೆಯು ಜಗತ್ತಿನ ಆವಿಷ್ಕಾರಗಳಲ್ಲಿ ಒಂದು. 700–800 ವರ್ಷಗಳ ಹಿಂದೆ ಪುರಂದರದಾಸರು ಕರ್ನಾಟಕ ಸಂಗೀತಕ್ಕೆ ಪಠ್ಯ ಬರೆದರೆಂಬ ದಾಖಲೆ ಇದೆ. 500 ವರ್ಷಗಳ ಹಿಂದೆ ಪಾಶ್ಚಾತ್ಯ ಸಂಗೀತಕ್ಕೆ ಪಠ್ಯ ಬರೆದ ದಾಖಲೆ ಇದೆ. ಅದಾದ ಬಳಿಕ ಸಂಗೀತ ಶಾಸ್ತ್ರಗಳಲ್ಲಿ ಯಾವುದೇ ಆವಿಷ್ಕಾರ, ಸಿದ್ಧತೆಗಳು ಆಗಿರಲಿಲ್ಲ. ಇದನ್ನು ಗಹನವಾಗಿ ಯೋಚನೆ ಮಾಡಿ, ಐದನೇ ಸಂಗೀತ ಶಾಸ್ತ್ರ ಎನ್ನುವ ಆಧುನಿಕ ಶಾಸ್ತ್ರ ಮಾಡಿದ್ದೇವೆ. ಅದನ್ನು ಜನಪದವೂ ಸೇರಿದಂತೆ ಯಾವುದೇ ಜಗತ್ತಿನ ಸಂಗೀತ ಕಲಿಯುವುದಕ್ಕೆ ಅನುಕೂಲ ಆಗುವಂತೆ‌, ಬರೆದು ಓದುವುದಕ್ಕೆ ದೇಸಿ ನೊಟೇಷನ್ ಎನ್ನುವ ವಿಶ್ವವ್ಯಾಪಕವಾದ ಸಂಗೀತ ಲಿಪಿಯನ್ನು ಆವಿಷ್ಕಾರ ಮಾಡಿದ್ದೇವೆ. ಅದು ವಿಶ್ವ ಸಂಗೀತ ಪ್ರಪಂಚಕ್ಕೆ ಕರ್ನಾಟಕದ ದೊಡ್ಡ ಕೊಡುಗೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT