ಮೈಸೂರು: 'ಕನ್ನಡ ಚಲನಚಿತ್ರರಂಗ ಚುಕ್ಕಾಣಿ ಇಲ್ಲದ ಹಡಗಿನಂತಾಗಿದೆ' ಎಂದು ಸಂಗೀತ ನಿರ್ದೇಶಕ ಹಂಸಲೇಖ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, 'ಕನ್ನಡದಲ್ಲಿ 250 ಜನ ಹೊಸ ನಿರ್ದೇಶಕರು, 500 ಹೊಸ ನಿರ್ಮಾಪಕರಿದ್ದಾರೆ. ಇವರ್ಯಾರಿಗೂ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪರ್ಕವೇ ಇಲ್ಲ. ಇವರೆಲ್ಲರನ್ನೂ ಕರೆದು ಮಾತನಾಡುವವರೇ ಮಂಡಳಿಯಲ್ಲಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಯಾರಾದರೂ ಮಂಡಳಿಯ ಚುಕ್ಕಾಣಿ ಹಿಡಿಯಬೇಕು' ಎಂದರು.

'ಮಹನೀಯರು ಕಟ್ಟಿದ ಚಲನಚಿತ್ರ ವಾಣಿಜ್ಯ ಮಂಡಳಿಯು ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕರನ್ನು ಒಟ್ಟಿಗೆ ನೋಡುತ್ತಿತ್ತು.

ಪ್ಯಾನ್ ಇಂಡಿಯಾದ ವ್ಯಾಪಾರದ ಸೋಗಿನಿಂದ ಕನ್ನಡ ಚಿತ್ರರಂಗ ದಿಕ್ಕು ತಪ್ಪಿ ಹೋಗಿದೆ. ಕನ್ನಡದಲ್ಲೇ ಬದುಕಬೇಕಾ ಅಥವಾ ಕನ್ನಡವನ್ನಿಟ್ಟುಕೊಂಡು ಎಲ್ಲರ ಜೊತೆಯಲ್ಲಿ ಬದುಕಬೇಕಾ ಎನ್ನುವ ದೊಡ್ಡ ತಾಪತ್ರಯ ಎದುರಾಗಿದೆ' ಎಂದು ಆತಂಕ ವ್ಯಕ್ತಪಡಿಸಿದರು.

'ಇಂದಿನ ಸಿನಿಮಾಗಳಲ್ಲಿ ಸಂಬಂಧಗಳ ಮೌಲ್ಯ ಕಾಣುತ್ತಿಲ್ಲ. ಬರೀ ಹೊಡಿ ಬಡಿ ಎನ್ನುವ, ಕಿವಿ ಮುಚ್ಚುವ ಸಂಗೀತ ಬರುತ್ತಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.