ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೂರೆಗೊಂಡ ಪಿಟೀಲು ವಾದನ

Published 22 ಮೇ 2023, 6:26 IST
Last Updated 22 ಮೇ 2023, 6:26 IST
ಅಕ್ಷರ ಗಾತ್ರ

ಕೊಣನೂರು (ಹಾಸನ ಜಿಲ್ಲೆ): ರಾಮನಾಥಪುರ ಹೋಬಳಿ ರುದ್ರಪಟ್ಟಣದಲ್ಲಿ ಐದು ದಿನಗಳಿಂದ ಆಯೋಜಿಸಿದ್ದ 20ನೇ ವಾರ್ಷಿಕ ಸಂಗೀತೋತ್ಸವ ಭಾನುವಾರ ತೆರೆಕಂಡಿತು.

ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ರಥೋತ್ಸವ ಮತ್ತು ಯುಗಳ ಪಿಟೀಲು ವಾದನದೊಂದಿಗೆ ಉದ್ಯುಕ್ತವಾಗಿ ತೆರೆ ಕಂಡಿತು.

ಬೆಳಿಗ್ಗೆ ಗಾನ ಕಲಾಭೂಷಣ ವಿದ್ವಾನ್ ಆರ್.ಕೆ.ಪದ್ಮನಾಭ್ ಮತ್ತು ಶಿಷ್ಯವೃಂದ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಸಭಿಕರಲ್ಲಿ ನವ ಚೈತನ್ಯ ಉಂಟು ಮಾಡಿತು.‌

ನಂತರ ಚನ್ನಕೇಶಸ್ವಾಮಿಗೆ ರಥೋತ್ಸವದ ವೇಳೆ ಆರ್.ಕೆ.ಪದ್ಮನಾಭ್, ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು, ಸಂಗೀತ ಪ್ರಿಯರು ಮತ್ತು ಸ್ಥಳೀಯರು ದೇವರನಾಮ ಸಂಕೀರ್ತನೆ ಹೇಳುತ್ತಾ ರಥದ ಮುಂದೆ ಕುಣಿದು ಕುಪ್ಪಳಿಸುತ್ತಾ ಸಾಗಿದ್ದು ವಿಶೇಷವಾಗಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ವಿದ್ವಾನ್ ಮೈಸೂರು ಎಂ.ನಾಗರಾಜು ಮತ್ತು ಮೈಸೂರು ಎಂ.ಮಂಜುನಾಥ್ ಯುಗಳ ಪಿಟೀಲುವಾದನ ಸಭಿಕರನ್ನು ಸಂಗೀತಲೋಕಕ್ಕೆ ಕರೆದೊಯ್ಯಿತು.

ಅನುಭವಿ ಕಲಾವಿದರ ಪಿಟೀಲಿನ ಸ್ವರತರಂಗ ಮತ್ತು ವಿದ್ವಾನ್ ತಿರುವಾರೂರು ಭಕ್ತವತ್ಸಲಂ ಮೃದಂಗ, ಗಿರಿಧರ್ ಉಡುಪ ಅವರ ಘಟವಾದನ, ಹದವಾಗಿ ಬೆರೆತು ಸಂಗೀತದ ಹೊನಲು ಹರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT