ಮೈಸೂರು: ಹಲವು ಸವಾಲುಗಳ ಕಾರಣದಿಂದಾಗಿ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಮೈಸೂರು–ಕುಶಾಲನಗರ ನಡುವಿನ (ಎನ್.ಎಚ್.275) ನಾಲ್ಕುಪಥಗಳ ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿದ್ದು, ಬಿರುಸಿನಿಂದ ನಡೆಯುತ್ತಿದೆ.

ವಿಧಾನಸಭೆ ಚುನಾವಣೆಗೆ ಮುನ್ನ ಮಂಡ್ಯದ ಗೆಜ್ಜಲಗೆರೆ ಸಮೀಪ 2023ರ ಮಾರ್ಚ್ 12ರಂದು ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು–ಮೈಸೂರು ಹೆದ್ದಾರಿ ಉದ್ಘಾಟನೆಯ ಜೊತೆಗೆ ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗಿನ ಹೆದ್ದಾರಿ ನಿರ್ಮಾಣ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಿದ್ದರು.

ಒಟ್ಟು 93 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ₹4,130 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ 2023ರಲ್ಲೇ ಕಾಮಗಾರಿ ಆರಂಭಗೊಂಡು ಈ ವೇಳೆಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆದ ವಿಳಂಬ, ಭೂಮಿ ನೀಡಲು ಅಲ್ಲಲ್ಲಿ ರೈತರಿಂದ ವಿರೋಧ ವ್ಯಕ್ತವಾದುದು ಮೊದಲಾದ ಕಾರಣಗಳಿಂದ ಕಾಮಗಾರಿಗೆ ಅಧಿಕೃತವಾಗಿ ಭೌತಿಕ ಚಾಲನೆಯೇ ದೊರೆತಿರಲಿಲ್ಲ. ಅಡೆತಡೆಗಳನ್ನು ದಾಟಿ ಬಂದಿರುವ ಈ ಯೋಜನೆಯು ಈಗ ಆರಂಭದ ಹಳಿಗೆ ಬಂದು ಕ್ರಮಿಸುತ್ತಿದೆ.

ಪ್ರಯತ್ನದ ಪರಿಣಾಮ: ಬಹುಬೇಡಿಕೆಯ ಈ ಯೋಜನೆಗೆ ಅನುಮೋದನೆ ಮಾಡಿಸಲು ಹಾಗೂ ಭೂಮಿಪೂಜೆ ನೆರವೇರಿಸಲು ಆಗಿನ ಸಂಸದ ಪ್ರತಾಪ ಸಿಂಹ ಶ್ರಮಿಸಿದ್ದರು. ಬಹಳಷ್ಟು ಬಾರಿ ಅಧಿಕಾರಿಗಳ ಸಭೆ ನಡೆಸಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳ್ಳುವಂತೆ ನೋಡಿಕೊಂಡಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ನೆನಪಿಸಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಟಿಕೆಟ್ ಸಿಗಲಿಲ್ಲ. ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಯೋಜನೆಗೆ ಚುರುಕು ನೀಡುವಂತೆ ನೋಡಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮ, ಕಾಮಗಾರಿಯು ಬಿರುಸಿನಿಂದ ಸಾಗುತ್ತಿದೆ.

ಯೋಜನೆ ಪೂರ್ಣಗೊಂಡಲ್ಲಿ ಕುಶಾಲನಗರ–ಮೈಸೂರು ಮಾರ್ಗದಲ್ಲಿ ಸಂಚರಿಸುವವರಿಗೆ ಬಹಳ ಅನುಕೂಲ ಆಗಲಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತೆ ಆಗುತ್ತದೆ. ಕಾಮಗಾರಿಯು ತ್ವರಿತವಾಗಿ ಪೂರ್ಣಗೊಂಡು ಬಳಕೆಗೆ ಲಭ್ಯವಾಗಬೇಕು ಎನ್ನುವುದು ಜನರ ಆಶಯವಾಗಿದೆ.

ಎರಡು ಪ್ರಮುಖ ಪ್ರವಾಸಿಗರ ನೆಚ್ಚಿನ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯು ಸದ್ಯ ಕಿರಿದಾಗಿರುವುದರಿಂದ ಹಾಗೂ ವಾಹನಗಳ ಸಂಚಾರ ದಟ್ಟಣೆಯು ಹೆಚ್ಚುತ್ತಲೇ ಇರುವುದರಿಂದ ಅಪಘಾತ, ಅನಾಹುತ, ಸಾವು–ನೋವುಗಳು ವರದಿ ಆಗುತ್ತಲೇ ಇವೆ. ನಾಲ್ಕುಪಥವಾಗಿ ಸಿದ್ಧವಾದಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಬಹುದು ಎಂದು ಆಶಿಸಲಾಗಿದೆ. ಪೂರ್ಣಗೊಳ್ಳಲು ಬಹಳಷ್ಟು ಸಮಯ ಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಯೋಜನೆಗೆ ಒಟ್ಟಾರೆ 1,351.67 ಎಕರೆ (547 ಹೆಕ್ಟೇರ್) ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ ಎಂದು ಯೋಜಿಸಲಾಗಿದೆ.

₹4,130 ಕೋಟಿ ವೆಚ್ಚದ ಯೋಜನೆ ಒಟ್ಟು 93 ಕಿ.ಮೀ. ಉದ್ದದ ರಸ್ತೆ 2023ರ ಮಾರ್ಚ್ 12ರಂದೇ ಭೂಮಿಪೂಜೆ ನಡೆದಿತ್ತು

ಅನುಮೋದನೆ ಗುದ್ದಲಿಪೂಜೆ ಮಾಡಿಸಿದ್ದೆ: ಪ್ರತಾಪ

‘2018ರಲ್ಲೇ ಅನುಮೋದನೆ ಪಡೆದುಕೊಂಡು 2023ರ ಮಾರ್ಚ್ 12ರಂದು ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ ದಿನವೇ ಗೆಜ್ಜಲಗೆರೆಯಲ್ಲಿ ಪ್ರದಾನಿ ನರೇಂದ್ರ ಮೋದಿ ಅವರಿಂದ ಭೂಮಿ ಪೂಜೆ ಮಾಡಿಸಿದ್ದ ಯೋಜನೆ ಇದು. ಕಾಮಗಾರಿಯು ಏಪ್ರಿಲ್ನಲ್ಲಿ ಆರಂಭವಾಗಿದ್ದು ಇದು ನನಗೆ ಹರ್ಷದ ಸಂಗತಿ’ ಎನ್ನುತ್ತಾರೆ ಮಾಜಿ ಸಂಸದ ಪ್ರತಾಪ ಸಿಂಹ. ‘ಒಟ್ಟು 92 ಕಿಮೀ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ 4 ಪ್ಯಾಕೇಜ್ಗಳಿವೆ. ಪ್ಯಾಕೇಜ್ -5 ಅಂದರೆ ‘ಬಿ’ ಅಗ್ರಹಾರ (ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ)ದಿಂದ ಯಲಚನಹಳ್ಳಿ (ಮೈಸೂರು ತಾಲ್ಲೂಕು) 19 ಕಿ.ಮೀ. ಮತ್ತು ಪ್ಯಾಕೇಜ್-3 (ಹುಣಸೂರು ತಾಲ್ಲೂಕಿನ ಬೆಳತ್ತೂರುನಿಂದ ಪಿರಿಯಾಪಟ್ಟಣ ತಾಲ್ಲೂಕಿನ ಹರವೆ ಮಲ್ಲಿರಾಜಪಟ್ಟಣವರೆಗಿನ 24.10 ಕಿ.ಮೀ.) ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಪ್ಯಾಕೇಜ್-4 ಸದ್ಯದಲ್ಲೇ ಆರಂಭವಾಗಲಿದ್ದು ಪ್ಯಾಕೇಜ್-2 ಅರಣ್ಯ ಇಲಾಖೆಯ ಕೃಪೆಗಾಗಿ ಕಾದಿದೆ. ಕುಶಾಲನಗರದಿಂದ ಮಡಿಕೇರಿ ಕಡೆಗೆ ಆರಂಭ ಆಗಬೇಕಿರುವ 22 ಕಿ.ಮೀ. ಉದ್ಧದ ಪ್ಯಾಕೇಜ್-1ಗೆ ಪರಿಸರವಾದಿಗಳ ತಕರಾರು ಮತ್ತು ಹೈಕೋರ್ಟ್ ವ್ಯಾಜ್ಯದಿಂದಾಗಿ ಕೈಬಿಟ್ಟು ಕುಶಾಲನಗರದವರೆಗೂ ಮಾತ್ರ ಯೋಜನೆ ಕೈಗೆತ್ತಿಕೊಂಡಿದ್ದೆವು. ಜನರು ಬೆಂಬಲಿಸಿದರೆ ಪ್ಯಾಕೇಜ್-1ಕ್ಕೂ ಅನುಮೋದನೆ ಪಡೆಯುವ ಪ್ರಯತ್ನ ಆರಂಭಿಸುತ್ತೇನೆ. ಕೆಲವು ಕೆಲಸ ಮಾಡಲು ಅಧಿಕಾರವೇ ಬೇಕೆಂದಿಲ್ಲ ಜನರ ಆಶೀರ್ವಾದವೇ ಸಾಕಾಗುತ್ತದೆ’ ಎಂದು ಹೇಳುತ್ತಾರೆ ಅವರು.

ಅನುಷ್ಠಾನಕ್ಕೆ ಕ್ರಮ ವಹಿಸಿರುವೆ: ಯದುವೀರ್

‘ಮೈಸೂರು-ಕುಶಾಲನಗರ ಹೆದ್ದಾರಿ ಯೋಜನೆಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ಯಾಕೇಜ್– 3ರ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಸಚಿವ ನಿತಿನ್ ಗಡ್ಕರಿ ಅವರನ್ನು ಕೋರಿದ್ದೆ. ಅನುಮೋದನೆ ಸಿಕ್ಕಿದೆ. ಇದು ನಮ್ಮ ಪ್ರದೇಶಕ್ಕೆ ಒಂದು ಪ್ರಮುಖ ಮೈಲಿಗಲ್ಲು. ವಿಶೇಷವಾಗಿ ಯೋಜನೆಯು ವರ್ಷಗಳಲ್ಲಿ ಎದುರಿಸಿದ ಹಲವು ವಿಳಂಬಗಳ ನಂತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆ ಮಾಡಿ ನಡೆಸಿದ ಮೇಲ್ವಿಚಾರಣೆಯ ಫಲವಾಗಿ ಸಾಧ್ಯವಾಗಿದೆ’ ಎಂದು ಸಂಸದ ಯದುವೀರ್ ಹೇಳಿದರು. ‘ಯೋಜನೆಯ ಸುತ್ತಲಿನ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಸಚಿವರೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಮನವರಿಕೆ ಮಾಡಿಕೊಟ್ಟಿದ್ದೆ. ಅವರ ಭರವಸೆಯಂತೆ ಅನುಮೋದನೆ ದೊರೆತಿದೆ. ಈ ಹೆದ್ದಾರಿ ಯೋಜನೆಯು ಸಂಪರ್ಕ ಹೆಚ್ಚಿಸುವಲ್ಲಿ ಬಹಳ ಸಹಕಾರಿ ಆಗಲಿದೆ. ಈ ಮಾರ್ಗದಲ್ಲಿ ಪ್ರಯಾಣ ಸುಗಮಗೊಳಿಸುವಲ್ಲಿ ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಆರ್ಥಿಕ ಮತ್ತು ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಬಹಳ ಮಹತ್ವದ್ದಾಗಿದೆ. ನಮ್ಮ ಜನರ ಪ್ರಯೋಜನಕ್ಕಾಗಿ ಇಂತಹ ಯೋಜನೆಗಳ ಅನುಷ್ಠಾನಕ್ಕೆ ನಾನು ಬದ್ಧವಾಗಿದ್ದೇನೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.