ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕಡೆಯ ದಿನ 13 ಮಂದಿಯಿಂದ ನಾಮಪತ್ರ

ಒಟ್ಟು 28 ಆಕಾಂಕ್ಷಿಗಳು, ಪರಿಶೀಲನೆ ಪ್ರಕ್ರಿಯೆ ಇಂದು
Published 5 ಏಪ್ರಿಲ್ 2024, 6:26 IST
Last Updated 5 ಏಪ್ರಿಲ್ 2024, 6:26 IST
ಅಕ್ಷರ ಗಾತ್ರ

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಗುರುವಾರ 13 ಮಂದಿ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಗುರುವಾರ ಕಡೆಯ ದಿನವಾಗಿತ್ತು. ಒಟ್ಟು 28 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಸಮಾಜವಾದಿ ಜನತಾ ಪಕ್ಷದ ಅಭ್ಯರ್ಥಿಯಾಗಿ (ಕರ್ನಾಟಕ) ಬೆಂಗಳೂರಿನ ಸಹಕಾರ ನಗರದ ಎಚ್.ಎಂ. ನಂಜುಂಡಸ್ವಾಮಿ, ಕರ್ನಾಟಕ ಜನತಾ ಪಕ್ಷದಿಂದ ಚಾಮರಾಜನಗರ ಜಿಲ್ಲೆಯ ದೊಡ್ಡರಾಯಪೇಟೆಯ ಎನ್. ಅಂಬರೀಷ್, ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್ ಪಕ್ಷದಿಂದ ಮೈಸೂರಿನ ಸಿದ್ಧಾರ್ಥನಗರದ ಎ.ಜಿ.ರಾಮಚಂದ್ರರಾವ್ ಹಾಗೂ ಬಹುಜನ ಸಮಾಜ ಪಕ್ಷದಿಂದ ಬೆಂಗಳೂರಿನ ಸೂರ್ಯನಗರದ ಕೆಎಚ್‌ಬಿ ಕಾಲೊನಿಯ ರೇವತಿ ರಾಜ್, ಪಕ್ಷೇತರರಾಗಿ ಕೊಡಗು ಜಿಲ್ಲೆಯ ಕುಂದಚ್ಚೇರಿ ಗ್ರಾಮದ ಪಿ.ಕೆ. ದರ್ಶನ್ ಶೌರಿ, ಮೈಸೂರಿನ ಕುವೆಂಪುನಗರದ ರಾಜು, ಸರಗೂರು ತಾಲ್ಲೂಕಿನ ಶಂಖಹಳ್ಳಿಯ ಸಣ್ಣ ನಾಯಕ, ಪಿರಿಯಾಪಟ್ಟಣ ತಾಲ್ಲೂಕು ಚಾಮರಾಯನಕೋಟೆಯ ಅಂಬೇಡ್ಕರ್ ಸಿ.ಜೆ., ನಂಜನಗೂಡು ತಾಲ್ಲೂಕು ಗೊದ್ದನಪುರದ ರಾಜಣ್ಣ, ಕೆ.ಆರ್. ನಗರದ ಲಾಲನಹಳ್ಳಿಯ ರಾಮಯ್ಯ ಡಿ., ಚಾಮರಾಜನಗರ ಜಿಲ್ಲೆ ಶಾಗ್ಯದ ಆರ್. ಮಹೇಶ್, ನಂಜನಗೂಡು ತಾಲ್ಲೂಕು ದೇವರಸನಹಳ್ಳಿಯ ಡಿ.ಎನ್. ನವೀನ್ ಕುಮಾರ್, ಹುಣಸೂರಿನ ಸರಸ್ವತಿಪುರಂನ ಶಿವಕುಮಾರ್ ನಾಮಪತ್ರ ಸಲ್ಲಿಸಿದರು. ಗುರುವಾರದವರೆಗೆ 15 ಮಂದಿ ಉಮೇದುವಾರಿಕೆ ನೀಡಿದ್ದರು.

ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ಏ.5ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT