ಮೈಸೂರು: ‘ರಾಜಕಾರಣ- ರಾಜಕಾರಣಿ ಇವೆರಡನ್ನು ಗೌರವದಿಂದ ಸಂಪಾದಿಸಬೇಕು. ಅದನ್ನು ನಾವೆಲ್ಲ ಉಳಿಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಶಿಸಿದರು.

ಜೆ.ಪಿ.ನಗರದ ಒಡನಾಡಿ ಸೇವಾ ಸಂಸ್ಥೆಯ ಜೀವ ಸಂಗಮ ರಾಜಶೇಖರ ಕೋಟಿ ಸಭಾಂಗಣದಲ್ಲಿ ಶನಿವಾರ ‘ಎ.ಎಚ್.ವಿಶ್ವನಾಥ್ ಬದುಕು-ಬರಹಗಳ ಮೆಲುಕು’, ಸಹಭೋಜನ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದು ಅಧಿಕಾರಿಗಳು, ರಾಜಕಾರಣಿಗಳು ಒಬ್ಬೊಬ್ಬರು ತಲಾ 20 ನಿವೇಶನ ನಡೆಯುತ್ತಿದ್ದಾರೆ. ರಾಜಕಾರಣಿಗಳಿಗೆ ಜನ ಅಧಿಕಾರ ನೀಡಿದ್ದಾರೆ ಎಂದರೆ ಅವರಿಗೆ ಏನು ಮಾಡಬೇಕು ಎಂದು ತಿಳಿದಿರಬೇಕು’ ಎಂದರು.

‘ಕಲಬುರ್ಗಿಯಲ್ಲಿ ಒಮ್ಮೆ ಕಾರಿನಲ್ಲಿ ಹೋಗುವಾಗ ಒಂದು ಹೆಣ್ಣು ಮಕ್ಕಳು ಕಾಲಿಗೆ ಚಪ್ಪಲಿ ಇಲ್ಲದೇ ಬಿರುಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಕಾರನ್ನು ನಿಲ್ಲಿಸಿ ಆಕೆ ಜೊತೆ ಚರ್ಚಿಸಿದಾಗ, ಅಕ್ಷರದ ಮಹತ್ವದ ಅರಿವಾಯಿತು. ನಂತರದಲ್ಲಿ ಶಿಕ್ಷಣ ಸಚಿವನಾಗಿ ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಿದೆ’ ಎಂದು ನೆನೆದರು.

ಬಿಜೆಪಿ ಮುಖಂಡ ರಘು ಕೌಟಿಲ್ಯ, ‘ವಿಶ್ವನಾಥ್ ಬಹುಮಖ ಪ್ರತಿಭೆ. ಇದ್ದದ್ದನ್ನು ಇದ್ದಹಾಗೇ ಮಾತನಾಡುವ ನೇರ ವ್ಯಕ್ತಿ’ ಎಂದರು.

ನಿವೃತ್ತ ಅಧಿಕಾರಿ ಎಂ.ಎನ್.ನಟರಾಜು, ಒಡನಾಡಿ ಸಂಸ್ಥೆಯ ಪರಶು– ಸ್ಟ್ಯಾನ್ಲಿ ಮಾತನಾಡಿದರು. ಮುಖಂಡರಾದ ಪ್ರಶಾಂತ್ ಗೌಡ, ಬಸವೇಗೌಡ, ಚಂದ್ರಶೇಖರ್, ಜಾಕೀರ್ ಅಹಮ್ಮದ್, ಅಮಿತ್, ಪೂರ್ವಜ್, ನಟೇಶ್, ಶೌಕತ್ ಆಲಿಖಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.