ವಿಭಾಗದ ಮುಖ್ಯಸ್ಥರ ವಿರುದ್ಧ ದೂರು
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಸಿ. ವೆಂಕಟೇಶ್ ವಿರುದ್ಧ ಕೆಲವು ವಿದ್ಯಾರ್ಥಿಗಳು ಉಪನ್ಯಾಸಕರಿಂದಲೇ ದೂರು ಕೇಳಿಬಂದಿದೆ. ‘ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ನೀಡದೇ ವಂಚಿಸಲಾಗುತ್ತಿದೆ. ಅಂಕಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಕ್ರೀಡಾಂಗಣ ನೀಡದೇ ಖಾಸಗಿಯವರಿಗೆ ನೀಡಲಾಗುತ್ತಿದೆ. ₹3–4 ಸಾವಿರ ಮೌಲ್ಯದ ಸಮವಸ್ತ್ರಕ್ಕೆ ₹10–12ಸಾವಿರದವರೆಗೆ ಶುಲ್ಕ ಪಡೆಯುತ್ತಿದ್ದು ರಸೀದಿ ನೀಡುತ್ತಿಲ್ಲ. ಮುಖ್ಯಸ್ಥರ ನೇಮಕದ ಕುರಿತೇ ದೂರುಗಳು ಇದ್ದು ಕುಲಪತಿ ಹಂತದಲ್ಲಿ ತನಿಖೆ ನಡೆಸಬೇಕು’ ಎಂದು ವಿದ್ಯಾರ್ಥಿಗಳು ಆಗ್ರಹಿಸುತ್ತಾರೆ.