ಮೈಸೂರು: ಕ್ರಿಸ್ಮಸ್ ಆಚರಣೆ ಆರಂಭಕ್ಕೆ ಎರಡು ದಿನವಷ್ಟೇ ಬಾಕಿ ಇದ್ದು, ಭಾನುವಾರ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್ಗಳ ಅಂಗಳವನ್ನು ಸಿಂಗರಿಸುವ ಕಾರ್ಯ ಭರದಿಂದ ನಡೆಯಿತು.

ವಾರಾಂತ್ಯ, ರಜಾ ದಿನವಾದ್ದರಿಂದ ಕ್ರೈಸ್ತ ಸಮುದಾಯದವರು ಮನೆಗಳನ್ನು ಸಿಂಗರಿಸಲು, ಬಂಧುಗಳು ಹಾಗೂ ಸ್ನೇಹಿತರಿಗೆ ಉಡುಗೊರೆಗಳನ್ನು ನೀಡಲು ವಸ್ತುಗಳ ಖರೀದಿಸಲು ಮುಗಿಬಿದ್ದರು.

ದೇವರಾಜ ಮಾರುಕಟ್ಟೆಗೆ ಸಮೀಪದ ಶಿವರಾಂಪೇಟೆ, ವಿನೋಬಾ ರಸ್ತೆಯ ಇಕ್ಕೆಲಗಳಲ್ಲಿನ ಮಹಾರಾಜ, ಮನ್ನಾರ್ಸ್ ಸೇರಿದಂತೆ ವಿವಿಧ ಮಾರುಕಟ್ಟೆ ಮಳಿಗೆಗಳಲ್ಲಿ ತೂಗು ಹಾಕಲಾಗಿದ್ದ ನಕ್ಷತ್ರಗಳು, ಘಂಟೆಗಳು, ಸಾಂತಾಕ್ಲಾಸ್ ಗೊಂಬೆಗಳನ್ನು ಕೊಂಡರು.

ಮನೆ ಹಾಗೂ ಚರ್ಚ್ಗಳಲ್ಲಿ ಗೋದಲಿ ನಿರ್ಮಿಸಿ ಅಲಂಕರಿಸುವುದು ಕ್ರಿಸ್ಮಸ್ ಆಚರಣೆಯ ಪ್ರಮುಖ ಆಕರ್ಷಣೆಯಾಗಿರುವುದರಿಂದ ಪುಟ್ಟ ಗೋದಲಿಯೊಳಗೆ ಆಡು, ಕುರಿ, ದನ-ಕರುಗಳ ಗೊಂಬೆಗಳನ್ನು ಜೋಡಿಸಲು ಖರೀದಿಸಿದರು.

‘ಪ್ಲ್ಯಾಸ್ಟಿಕ್ನ ನಕ್ಷತ್ರಗಳು ₹ 120ರಿಂದ ₹ 1,400ರವರೆಗೆ, ವಿದ್ಯುತ್ ದೀಪಗಳು ₹ 150ರಿಂದ ₹ 2,500 ರವರೆಗೆ ಇದ್ದವು. ಸಾಲು ಉದ್ದವಾದಷ್ಟೂ ದರವು ಹೆಚ್ಚಿದೆ. ಸಾಂಟಾಕ್ಲಾಸ್ ಮುಖವಾಡಗಳು ಡಜನ್ಗೆ ₹ 120 ಇವೆ’ ಎಂದು ಶಿವರಾಂಪೇಟೆಯ ವ್ಯಾಪಾರಿ ಹರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಲ್ಸ್ಗಳು ₹ 80ರಿಂದ ₹ 400 ರವರೆಗೆ ಇತ್ತು. ಹಸಿರಿನ ರೀತ್ ಹಾಗೂ ಮರಗಳು ಗಾತ್ರಕ್ಕೆ ತಕ್ಕಂತೆ ದರದ ವ್ಯತ್ಯಾಸವಿತ್ತು. 8 ಅಡಿಯ ಕ್ರಿಸ್ಮಸ್ ಮರ ದರವು ₹ 15 ಸಾವಿರದವರೆಗೂ ಇತ್ತು.

ಗೋದಲಿ ಖರೀದಿ:

ಬಿದಿರಿನಿಂದ ಮಾಡಿದ ಗೋದಲಿಗಳನ್ನು ಬಂಬೂ ಬಜಾರ್ನಲ್ಲಿ ಕೊಳ್ಳುವುದು ನಡೆಯಿತು. ಗೋದಲಿಗಳು ₹ 250ರಿಂದ ₹ 1 ಸಾವಿರದವರೆಗೆ ವಿವಿಧ ಗಾತ್ರದಲ್ಲಿ ದೊರೆಯುತ್ತಿದ್ದವು. ಮನೆಯ ಮುಂದೆ ತೂಗುಹಾಕಲು ಇದ್ದ ಬಿದಿರಿನ ನಕ್ಷತ್ರಗಳು ₹ 300ರಿಂದ 500ರವರೆಗೆ ಲಭ್ಯ ಇದ್ದವು.

‘ಬಿದಿರಿನಿಂದ ಮಾಡಿದ ನಕ್ಷತ್ರ, ಗೋದಲಿ ಖರೀದಿ ಕಳೆದ ಬಾರಿಗಿಂತ ಪರವಾಗಿಲ್ಲ. ಪ್ಲ್ಯಾಸ್ಟಿಕ್ ನಿಂದ ಮಾಡಿದ್ದವನ್ನು ಖರೀದಿಸುತ್ತಿದ್ದಾರೆ. ವಯಸ್ಸಾದವರು ಮಾತ್ರ ಖರೀದಿಗೆ ಇಲ್ಲಿ ಬರುತ್ತಾರೆ’ ಎಂದು ಬಂಬೂ ಬಜಾರಿನ ವ್ಯಾಪಾರಿ ಸಿದ್ದರಾಜು ಹೇಳಿದರು.

ಕೇಕ್ಗಳ ಸಾಲು:

ಬೇಕರಿಗಳಲ್ಲಿ ಕೇಕ್ಗಳ ಸಾಲುಗಳೇ ಖರೀದಿಗೆ ಕಾಯುತ್ತಿದ್ದವು. ಕುವೆಂಪುನಗರದ ನ್ಯೂ ಕಾಂತರಾಜ ಅರಸು ರಸ್ತೆಯ ಕೆಫೆ ಡಿ ಅರೊಮಾದಲ್ಲಿ ಕ್ರಿಸ್ಮಸ್ ಮರವನ್ನು ಅಲಂಕರಿಸಲಾಗಿದ್ದು, ತರಾವರಿ ಕೇಕ್ಗಳನ್ನು ಗ್ರಾಹಕರಿಗೆ ಇಡಲಾಗಿತ್ತು. ಪ್ಲಮ್, ರೋಸ್ ಕೇಕ್, ಕಜ್ಜಾಯ, ಕಲ್ಕಲ, ಚಕ್ಕುಲಿ ಸೇರಿದಂತೆ ಮುಂತಾದ ತಿನಿಸುಗಳನ್ನು ಸಿದ್ಧಪಡಿಸಿಡಲಾಗಿತ್ತು.

ಫಿಲೊಮಿನಾದಲ್ಲಿ ಐಫೆಲ್ ಟವರ್!

ಫಿಲೊಮಿನಾ ಚರ್ಚ್ನ ಅಂಗಳದಲ್ಲಿ 16 ಅಡಿ ಎತ್ತರದ ಐಫೆಲ್ ಟವರ್ನ ಮಾದರಿಯನ್ನು ನಿರ್ಮಿಸಲಾಗಿತ್ತು. ಹಾರ್ಡ್ವಿಕ್ ಚರ್ಚ್ನ ಗೋಡೆಗಳು ಹಳದಿ ಬಣ್ಣವನ್ನು ಕಂಡವು. ಕಾರ್ಮಿಕರು ಹಾಗೂ ಚರ್ಚ್ಗಳ ಸಿಬ್ಬಂದಿ ಅಂಗಳವನ್ನು ಸಿಂಗರಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಗೋದಲಿಗಳನ್ನು ನಿರ್ಮಿಸಿದರು. ಪ್ರಾರ್ಥನಾಲಯದ ಒಳಾಂಗಣವನ್ನು ನಕ್ಷತ್ರಗಳು ಬೆಲ್ಸ್ಗಳು ಸೇರಿದಂತೆ ವಿವಿಧ ವಸ್ತುಗಳಿಂದ ಅಲಂಕರಿಸುವ ಕಾರ್ಯವು ವೇಗವಾಗಿ ನಡೆಯಿತು. ಸಾಡೇ ವೆಸ್ಲಿ ಬಾರ್ತೊಲೋಮಿಯಾ ಆರ್.ಎಸ್.ನಾಯ್ಡು ನಗರದ ಇನ್ಫೆಂಟ್ ಜೀಸಸ್ ಯಾದವಗಿರಿಯ ಸೇಕ್ರೆಡ್ ಹಾರ್ಟ್ ಜಯಲಕ್ಷ್ಮಿಪುರಂನ ಸೇಂಟ್ ಜೋಸೆಫ್ ವಿಶ್ವೇಶ್ವರ ನಗರದ ಸೇಂಟ್ ಥಾಮಸ್ ಸೇಂಟ್ ಮೇರಿಸ್ ಸೇರಿದಂತೆ ನಗರದಲ್ಲಿರುವ 40ಕ್ಕೂ ಹೆಚ್ಚು ಚರ್ಚ್ಗಳಲ್ಲಿ ವಿದ್ಯುತ್ ದೀಪಗಳನ್ನು ಅಲಂಕರಿಸಲು ಸಿದ್ಧತೆ ನಡೆಯಿತು. ಆವರಣಗಳಲ್ಲಿ ಸಾಂಟಾಕ್ಲಾಸ್ನ ರಥ ಹಾಗೂ ಸಾರಂಗಗಳನ್ನು ನಿಲ್ಲಿಸಲಾಗಿತ್ತು ಮಿನುಗುವ ನಕ್ಷತ್ರಗಳನ್ನು ತೂಗು ಹಾಕಲಾಗಿತ್ತು. ಸಿಎಸ್ಐ ಮಿಷನ್ ಆಸ್ಪತ್ರೆ ಸೇಂಟ್ ಜೋಸೆಫ್ ಸೇಂಟ್ ಮೇರಿಸ್ ಆಸ್ಪತ್ರೆಗಳಲ್ಲಿಯೂ ಸಿದ್ಧತೆ ನಡೆದಿತ್ತು. ಸಿಕೆಸಿ ಸೇಂಟ್ ಜೋಸೆಫ್ ನಿರ್ಮಲಾ ಸೇರಿದಂತೆ ಹಲವು ಶಾಲೆಗಳಲ್ಲೂ ಹಬ್ಬದ ಅಲಂಕಾರಗಳಲ್ಲಿ ಸಿಬ್ಬಂದಿ ನಿರತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.