ಮೈಸೂರು: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ಮೈಸೂರು ನಗರ ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಡಿಸಿಪಿ ಕೆ.ಎಸ್.ಸುಂದರ್ರಾಜ್ ಗುರುವಾರ ಅಭಿನಂದಿಸಿದರು.

ಜ.6ರಿಂದ 9ರವರೆಗೆ ನಡೆದ ಕ್ರೀಡಾಕೂಟದಲ್ಲಿ ಮೈಸೂರು ನಗರ ಪೊಲೀಸರ ತಂಡವು ಹ್ಯಾಂಡ್ಬಾಲ್ನಲ್ಲಿ ಪ್ರಥಮ, ಹಗ್ಗಜಗ್ಗಾಟದಲ್ಲಿ ದ್ವಿತೀಯ ಸ್ಥಾನ ಪಡೆಯಿತು. ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ವಿ.ವಿ ಪುರಂ ಠಾಣೆಯ ಶಾರೂಖ್ ತರಿಹಾಲ್ ಪ್ರಥಮ, ಹೈಜಂಪ್ನಲ್ಲಿ ಕುವೆಂಪುನಗರ ಠಾಣೆಯ ಕೆ. ಅಶ್ವಿನಿ ಪ್ರಥಮ, ಲಾಂಗ್ಜಂಪ್ ಹಾಗೂ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು.

ವಿಧ್ವಂಸಕ ಕೃತ್ಯ ತಡೆ ತಪಾಸಣಾ ತಂಡದ (ಎ.ಎಸ್.ಸಿ ಟೀಮ್) ಅಮರ್ನಾಥ್, 100 ಮೀ ಓಟದಲ್ಲಿ ದ್ವಿತೀಯ ಹಾಗೂ 200 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದರು. ಗುಂಡು ಎಸೆತದಲ್ಲಿ ಸಶಸ್ತ್ರ ಮೀಸಲು ಪಡೆಯ ಪರಶುರಾಮ್ ಕಾಂಬ್ಳೆ ತೃತೀಯ ಸ್ಥಾನವನ್ನು ಪಡೆದರು.

ತಂಡದ ವ್ಯವಸ್ಥಾಪಕ ಪಿ. ಸುರೇಶ್, ತೇಜ್ಗೋಪಾಲ್ ಎಸ್.ಜಿ. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.