ಮೈಸೂರು: ‘ಕೆಲವರು ಜೊತೆಯಲ್ಲೇ ಇದ್ದು ಮದ್ದು ಹಾಕುವ ಕೆಲಸ ಮಾಡುತ್ತಾರೆ’. – ‘ದಸರಾದಲ್ಲಿ ಅಧ್ವಾನಗಳು ನಡೆದವು’ ಎಂಬ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೇಲಿನಂತೆ ತಿರುಗೇಟು ನೀಡಿದರು.

ಸುದ್ದಿಗಾರರ ಪ್ರಶ್ನೆಗಳಿಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಕೆಲವರು ರಾಜಕೀಯವಾಗಿ ಏನನ್ನೂ ಮಾಡಲು ಆಗದಿದ್ದಾಗ ಪಕ್ಕದಲ್ಲೇ ಕುಳಿತು ಮದ್ದು ಹಾಕಿ ಬಿಡುತ್ತಾರೆ. ಅಂಥವರಿಗೆ ಚಾಮುಂಡಿ ತಾಯಿ ಒಳ್ಳೆಯ ಬುದ್ಧಿ ಕೊಡಲಿ. ಅವರನ್ನೆಲ್ಲಾ ಎದುರಿಸುವ ಶಕ್ತಿಯನ್ನು ನನಗೆ ಕೊಡಲಿ’ ಎಂದರು.

‘ದಸರಾ ಆದ ಮೇಲೆ, ದಸರಾ ನಡೆಯುವಾಗ ಇಂತಹ ಮದ್ದು ಹಾಕುವ ಕೆಲಸ ಜೊತೆಯಲ್ಲಿ ಇದ್ದವರಿಂದಲೇ ನಡೆದಿದೆ. ಅದು ನನಗೆ ಗೊತ್ತಿದೆ. ಎಲ್ಲವನ್ನೂ ಮೀರಿ ದಸರಾ ಯಶಸ್ವಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 10 ದಿನವೂ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೇನೆ. ಮೈಸೂರಿನವರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗಲೂ ಈ ರೀತಿ ಎಲ್ಲಾ ಕಾರ್ಯಕ್ರಮಗಳಿಗೆ ಹೋಗಿರಲಿಲ್ಲ. ನಾನು ಪ್ರಮಾಣಿಕವಾಗಿ, ಉತ್ಸವವು ಅಚ್ಚುಕಟ್ಟಾಗಿ ನಡೆಯುವಂತಾಗಲು ಶ್ರಮಿಸಿದ್ದೇನೆ. ಲೆಕ್ಕವನ್ನು ಶೀಘ್ರದಲ್ಲೇ ಕೊಡುತ್ತೇವೆ’ ಎಂದು ತಿಳಿಸಿದರು.

‘ಈ ಬಾರಿಯ ದಸರಾದ ಒಟ್ಟಾರೆ ಪ್ರಗತಿ ಮತ್ತು ಆಗಿರುವ ಲೋಪಗಳ ಬಗ್ಗೆ ಪುಸ್ತಕ ತರಲು ಪ್ರಯತ್ನಿಸುತ್ತೇನೆ’ ಎಂದರು.

ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಪ್ರತಾಪ ಸಿಂಹ, ‘ಇದು ಲಕ್ಷಾಂತರ ಜನರು ಬಂದು ಹೋದ ಕಾರ್ಯಕ್ರಮ. ಒಂದೆರೆಡು ತಪ್ಪುಗಳು ಸಹಜ. ಮೊಸರಲ್ಲಿ ಕಲ್ಲು ಹುಡುಕುವವರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ’ ಎಂದು ನುಡಿದರು.

ಓದಿ...ಉದ್ದೇಶಪೂರ್ವಕವಾಗಿಯೇ ಟಿಪ್ಪು ಸುಲ್ತಾನ್ ಹೆಸರು ತೆಗೆಸುತ್ತಿದ್ದೇನೆ: ಪ್ರತಾಪ ಸಿಂಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.