ಮೈಸೂರು: ‘ನಗರದಲ್ಲಿ ಮಾದಕ ವಸ್ತು ತಯಾರಿಕಾ ಘಟಕ ಪತ್ತೆಯಾಗಿರುವುದು ಹಾಗೂ ರಾಜಾರೋಷವಾಗಿ ನಡೆಯುತ್ತಿದ್ದುದ್ದನ್ನು ಗಮನಿಸಿದರೆ ಇಲ್ಲಿನ ಪೊಲೀಸ್ ಹಾಗೂ ಗುಪ್ತಚರ ವ್ಯವಸ್ಥೆಯ ವೈಫಲ್ಯವನ್ನು ಕಾಣಬಹುದು’ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಠಾಣೆಗಳನ್ನು ಹೆಚ್ಚಿಸಬೇಕು, ಠಾಣೆಗಳ ವ್ಯಾಪ್ತಿಯನ್ನು ಪುನರ್ ರಚಿಸಬೇಕು, ಜನರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದು ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇನೆ. ಕಾನೂನು–ಸುವ್ಯವಸ್ಥೆ ಕಾಪಾಡುವುದು, ಸಂಚಾರ ವ್ಯವಸ್ಥೆ ಹಾಗೂ ಪೊಲೀಸರ ನಿಯೋಜನೆಯಲ್ಲಿ ನನ್ನ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವರ್ತುಲ ರಸ್ತೆ ನಿರ್ಮಾಣವಾದ ನಂತರ ಪ್ರವೇಶ ಹಾಗೂ ನಿರ್ಗಮನ ಸುಲಭವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದುದು ಹಾಗೂ ನಿಗಾ ವಹಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಈ ಸಂಬಂಧ ಸರ್ಕಾರದ ಗಮನವನ್ನೂ ಸೆಳೆದಿದ್ದೇನೆ. ಪೊಲೀಸ್ ಆಯುಕ್ತರೊಂದಿಗೂ ಮಾತನಾಡಿದ್ದೇನೆ. ಹೊಸದಾಗಿ ಪೊಲೀಸ್ ಠಾಣೆಯನ್ನೂ ಮಂಜೂರು ಮಾಡಿಸಿದ್ದೇನೆ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ’ ಎಂದರು.

‘ಚುನಾವಣೆ ಇದ್ದಾಗ ಪಕ್ಷ–ವಿರೋಧಪಕ್ಷ. ಆಯ್ಕೆಯಾದ ಮೇಲೆ ಎಲ್ಲರೂ ಜನರ ಹಿತಕ್ಕಾಗಿ ಕೆಲಸ ಮಾಡಬೇಕು. ಲೋಪವನ್ನು ಕೇವಲ ಒಬ್ಬರ ಮೇಲೆ ಹೇಳುವಂಥದ್ದಲ್ಲ. ಅವರು ಸಂಸದರೇ ಇರಬಹುದು, ಬೇರೆ ಯಾರೇ ಇರಬಹುದು. ರಾಜ್ಯ ಸರ್ಕಾರದಿಂದ ಅವರಿಗೆ ವಾಹನ ಕೊಟ್ಟಿದ್ದೇವೆ. ಎಲ್ಲ ವ್ಯವಸ್ಥೆ ಕಲ್ಪಿಸಿದ್ದೇವೆ. ರಾಜ್ಯದ ಹಿತ ಕಾಯುವುದ್ದು ಬಿಟ್ಟು, ಲೋಕಸಭೆಯಲ್ಲಿ ರಾಜ್ಯದ ವಿರುದ್ಧವೇ ಮಾತನಾಡುವುದು ಸಂಸದರಿಗೆ ಶೋಭೆ ತರುವಂಥದ್ದಲ್ಲ’ ಎಂದು ಸಂಸದ ಯದುವೀರ್ ನಡೆಯ ವಿರುದ್ಧ ಕಿಡಿಕಾರಿದರು.

‘ಜಾತಿ, ಬಟ್ಟೆ, ಪ್ರಾಂತ್ಯ ನೋಡಿ ಸ್ನೇಹ ಬೆಳೆಸುವುದು ಸರಿಯಲ್ಲ. ಕ್ಷೇತ್ರದಲ್ಲಿ ನಿರ್ದಿಷ್ಟ ಜನಸಂಖ್ಯೆ ಜಾಸ್ತಿ ಇದೆ ಎಂಬ ಕಾರಣಕ್ಕೆ ಅಲ್ಲಿ ನಡೆಯುತ್ತಿರುವುದೆಲ್ಲವೂ ಅಕ್ರಮ ಎಂದು ಹೇಳುವುದು ತಪ್ಪು. ತಪ್ಪಾಗಿದ್ದರೆ ಸರಿಪಡಿಸಲು ಎಲ್ಲರೂ ಕೈಜೋಡಿಬೇಕು. ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಬೇಕು ಎಂದು ಪೊಲೀಸರಿಗೂ ಸೂಚಿಸಿದ್ದೇನೆ. ಕಡಿವಾಣ ಹಾಕಲು ಏನೆಲ್ಲಾ ಮಾಡಬೇಕು ಎಂಬುದನ್ನು ನೋಡಬೇಕು. ನಮಗೆ ಬರುವ ಮಾಹಿತಿಯನ್ನು ಇಲಾಖೆಯೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಾಗರಿಕ ವ್ಯವಸ್ಥೆಯ ವಿರುದ್ಧ ನಡೆದುಕೊಳ್ಳುವ ಯಾರನ್ನೂ ಸಹಿಸಲಾಗುವುದಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕಾಗುತ್ತದೆ’ ಎಂದರು.

‘ಪೊಲೀಸ್ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಬೇಕು. ಈ ವ್ಯವಸ್ಥೆ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ್ದಷ್ಟೆ ಅಲ್ಲ. ಮೈಸೂರಿನಲ್ಲಿ ಪೊಲೀಸರು ಇನ್ನಷ್ಟು ಜಾಗ್ರತೆಯಿಂದ ಕೆಲಸ ಮಾಡಬೇಕಾಗಿದೆ. ಮೈಸೂರು ಪ್ರವಾಸಿ ತಾಣವಾಗಿರುವುದರಿಂದ ಹೆಚ್ಚಿನ ಸುರಕ್ಷತೆ ಒದಗಿಸಬೇಕಾದುದು ನಮ್ಮ ಕರ್ತವ್ಯ’ ಎಂದು ಪ್ರತಿಕ್ರಿಯಿಸಿದರು.
.ಮೈಸೂರಿನಲ್ಲಿ ಡ್ರಗ್ಸ್ ದಂಧೆ: CBI ತನಿಖೆಗೆ ಯದುವೀರ್ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.