ನಂಜನಗೂಡು: ತಾಲ್ಲೂಕಿನ ಮುದ್ದಹಳ್ಳಿ ಸಮೀಪ ಸೋಮವಾರ ಗೂಡ್ಸ್ ವಾಹನದಲ್ಲಿ ಕೇರಳದ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಜಾನುವಾರುಗಳನ್ನು ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದರು.

ಸೋಮವಾರ ಬೆಳಗಿನ ಜಾವ ಮುದ್ದಹಳ್ಳಿ ಸಮೀಪ ಸರಕು ಸಾಗಾಣಿಕೆ ವಾಹನದಲ್ಲಿ 3 ಕರುಗಳನ್ನು ಕೊಂಡೊಯ್ಯುತ್ತಿರುವುದನ್ನು ಗಮನಿಸಿದ ತಾಲ್ಲೂಕು ಅಧ್ಯಕ್ಷ ಮಹದೇವಸ್ವಾಮಿ ವಾಹನ ತಡೆದು ಪ್ರಶ್ನಿಸಿದರು. ಬಳಿಕ ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವುದನ್ನು ಖಚಿತಪಡಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಾನುವಾರುಗಳ ಸಹಿತ ವಾಹನ ವಶಕ್ಕೆ ಪಡೆದರು.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರತಿದೂರು ದಾಖಲು: ಪ್ರಕರಣಕ್ಕೆ ಸಂಬಂಧ ಸರಗೂರು ಪಟ್ಟಣದ ನಿವಾಸಿ ಖಲೀಲ್ ಎಂಬುವರು ಪ್ರತಿದೂರು ನೀಡಿದ್ದು, ತಾನು ಹಲ್ಲರೆ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದು, ಕೃಷಿ ಚಟುವಟಿಕೆಗೆಂದು ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದ ಸಂದರ್ಭ ನಮ್ಮ ವಾಹನವನ್ನು ತಾಲ್ಲೂಕಿನ ಮುದ್ದಹಳ್ಳಿ ಸಮೀಪ ತಡೆ ಹಿಡಿದ ಮೂರು ಮಂದಿ ನನ್ನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ದೂರು ನೀಡಿದ್ದೇನೆ. ಆರೋಪಿಗಳ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಿ ಎಂದು ದೂರಿದ್ದಾರೆ ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.