ಮೈಸೂರು: ಇಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿ ಭಾನುವಾರ ನಡೆದ ‘ಪೇರೆಂಟ್ ಕ್ರಾಫ್ಟ್–2025’ ಕಾರ್ಯಕ್ರಮವು, ಹೊಸದಾಗಿ ಪೋಷಕರಾದವರು ಮತ್ತು ಪೋಷಕರಾಗುವ ನಿರೀಕ್ಷೆಯಲ್ಲಿರುವವರಿಗೆ ಮಾರ್ಗದರ್ಶನ ನೀಡಿತು.

80 ಮಂದಿ ಪಾಲ್ಗೊಂಡಿದ್ದರು. ಸೇವಿಸಬೇಕಾದ ಆಹಾರ, ಉತ್ತಮ ಜೀವನಶೈಲಿ ಮೊದಲಾದವುಗಳ ಕುರಿತು ಸಲಹೆ ನೀಡಲಾಯಿತು.

ಮಣಿಪಾಲ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಅಮೂಲ್ಯ ಕೆ.ಜಿ., ಡಾ.ಶಾಹೀನ್ ಅಖ್ತರ್, ಡಾ.ಭುವನೇಶ್ವರ ಯು. ಮಾಹಿತಿ ನೀಡಿದರು.

‘ಜೀವನದ ಪ್ರಮುಖ ಹಂತಕ್ಕೆ ಸಿದ್ಧರಾಗುತ್ತಿರುವವರ ಆತಂಕಗಳನ್ನು ನಿವಾರಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.

ಗರ್ಭಾವಸ್ಥೆಯ ವ್ಯಾಯಾಮಗಳ ಪ್ರಾತ್ಯಕ್ಷಿಕೆ, ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ಚರ್ಚೆ ನಡೆಯಿತು. ಸಾಮಾನ್ಯ ಹೆರಿಗೆ, ಸಿ-ಸೆಕ್ಷನ್ ಮತ್ತು ಹೆರಿಗೆ ನೋವಿಗೆ ಎಪಿಡ್ಯೂರಲ್ ಅರಿವಳಿಕೆ ಬಗ್ಗೆ ತಿಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.