ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | 50 ಎಐ ಕ್ಯಾಮೆರಾ ಅಳವಡಿಕೆ

ನಿಯಮ ಉಲ್ಲಂಘಿಸಿದರೆ ದಂಡ: ಪೊಲೀಸರ ಎಚ್ಚರಿಕೆ
Published 27 ಜೂನ್ 2024, 15:18 IST
Last Updated 27 ಜೂನ್ 2024, 15:18 IST
ಅಕ್ಷರ ಗಾತ್ರ

ಮೈಸೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವುದಕ್ಕಾಗಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸ್ಥಳೀಯ ಠಾಣಾ ವ್ಯಾಪ್ತಿಯ 23 ಸ್ಥಳಗಳಲ್ಲಿ 50 ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇವು ಜುಲೈ 7ರಿಂದ ಕಾರ್ಯನಿರ್ವಹಿಸಲಿವೆ. ನಿಯಮ ಉಲ್ಲಂಘಿಸಿದವರು ಅಧಿಕೃತ ವೆಬ್‌ಸೈಟ್‌ ಮೂಲಕ ದಂಡದ ಮೊತ್ತವನ್ನು ಪರಿಶೀಲಿಸಿ ಸ್ಥಳೀಯ ಠಾಣೆಯಲ್ಲಿ ಪಾವತಿಸಬೇಕು ಎಂದು ಇಲಾಖೆ ತಿಳಿಸಿದೆ.

ರಸ್ತೆ ಅಪಘಾತದಿಂದಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿದಿನ 1–2 ಸಾವುಗಳಾಗುತ್ತಿವೆ. ಇವನ್ನು ನಿಯಂತ್ರಿಸಲು ಸಂಚಾರ ನಿಯಮ ಉಲ್ಲಘಿಸುವವರನ್ನು ಕ್ಯಾಮೆರಾ ಮೂಲಕ ಗುರುತಿಸಿ, ದಂಡ ವಿಧಿಸಲಾಗುವುದು. https://payfine.mchallan.com:7271 ವೆಬ್‌ಸೈಟ್‌ ಹಾಗೂ ಸ್ಥಳೀಯ ಠಾಣೆಯಲ್ಲಿ ದಂಡ ಪಾವತಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT