ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿ.ನರಸೀಪುರ: ಜೂನ್ 4ಕ್ಕೆ ವಿವಿಧೆಡೆ ವಿದ್ಯುತ್ ವ್ಯತ್ಯಯ

Published 3 ಜೂನ್ 2023, 16:28 IST
Last Updated 3 ಜೂನ್ 2023, 16:28 IST
ಅಕ್ಷರ ಗಾತ್ರ

ತಿ.ನರಸೀಪುರ: ತಾಲ್ಲೂಕಿನ ಮೂಗೂರು, ತಿ.ನರಸೀಪುರ ಗರ್ಗೇಶ್ವರಿ, ತಾಯೂರು ವಿದ್ಯುತ್ ವಿತರಣಾ (66/11ಕೆವಿ) ಕೇಂದ್ರಗಳಲ್ಲಿ ಮೈಸೂರಿನ ಕೆಪಿಟಿಸಿಎಲ್ ವತಿಯಿಂದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಜೂನ್ 4 ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಿ.ನರಸೀಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಪೂರೈಕೆಯಾಗುವ ತಿ.ನರಸೀಪುರ ಪಟ್ಟಣ, ಕಿರಗಸೂರು, ಟಿ.ದೊಡ್ಡಪುರ ಹೆಮ್ಮಿಗೆ, ಬೆನಕನಹಳ್ಳಿ ಮುತ್ತಲವಾಡಿ, ಸೋಸಲೆ ಗ್ರಾಮಗಳು ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಗಳು. ಮೂಗೂರು ವಿತರಣಾ ಕೇಂದ್ರ ವ್ಯಾಪ್ತಿಯ ಮೂಗೂರು ಕೊತ್ತೇಗಾಲ, ಆಲಗೂಡು, ವಾಟಾಳು, ಮೂಗೂರು ಮೋಳೆ, ಕೊತ್ತವಾಡಿ, ಕೊತ್ತವಾಡಿ ಮೋಳೆ ಗ್ರಾಮಗಳ ವ್ಯಾಪ್ತಿ.

ಗರ್ಗೇಶ್ವರಿ ವಿತರಣಾ ಕೇಂದ್ರದಿಂದ ಹೋಗುವ ಎಡದೊರೆ, ಕುರಿಸಿದ್ದನಹುಂಡಿ ಗರ್ಗೇಶ್ವರಿ, ಹಳೆ ತಿರುಮಕೂಡಲು, ಹೊಸಕೋಟೆ, ಇಂಡವಾಳು, ರಾಯರ ಹುಂಡಿ, ಹೊಸ ಹಾಗೂ ಹಳೆ ಕೆಂಪಯ್ಯನಹುಂಡಿ ಗ್ರಾಮಗಳು ಹಾಗೂ ತಾಯೂರು ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ತಾಯೂರು, ಈಶ್ವರಗೌಡನಹಳ್ಳಿ, ವಡ್ಡರ ಹುಂಡಿ, ಬೀರಿಹುಂಡಿ ಕೊಟ್ಟರಾಯನಹುಂಡಿ ಗೆಜ್ಜೆಗನಳ್ಳಿ ಕಾಹಳ್ಳಿ ಹಾಗೂ ಕಲ್ಕುಂದ ವ್ಯಾಪ್ತಿಯ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT