ಮೈಸೂರು: ಪ್ರಸ್ತುತ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಇಲ್ಲಿನ ಪೊಲೀಸ್ ತರಬೇತಿ ಶಾಲೆಯ ಉಪ ಪ್ರಾಂಶುಪಾಲ ಪಿ.ಉಮೇಶ್ ಆಯ್ಕೆಯಾಗಿದ್ದಾರೆ.

ಪುತ್ತೂರಿನವರಾದ ಇವರು 1993ರಲ್ಲಿ ಕಾನ್‌ಸ್ಟೆಬಲ್ ಆಗಿ ಪೊಲೀಸ್ ಇಲಾಖೆಯನ್ನು ಪ್ರವೇಶಿಸಿದರು. ಮಂಗಳೂರು ಮತ್ತು ಉಡುಪಿಯಲ್ಲಿ ಕಾರ್ಯನಿರ್ವಹಿಸಿದ ನಂತರ 2002ರಲ್ಲಿ ನೇಮಕಾತಿ ಪರೀಕ್ಷೆ ಬರೆದು ಸಬ್‌ಇನ್‌ಸ್ಪೆಕ್ಟರ್ ಆಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದರು. ಮರುವರ್ಷವೇ ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಎಸ್‌ಟಿಎಫ್ ಪಡೆ ಸೇರಿ, ವೀರಪ್ಪನ್ ಹತ್ಯೆಯವರೆಗೂ ಅದೇ ತಂಡದಲ್ಲಿ ಮುಂದುವರಿದಿದ್ದರು.

ನಂತರ ಇನ್‌ಸ್ಪೆಕ್ಟರ್ ಆಗಿ, ಡಿವೈಎಸ್‌ಪಿ ಬಡ್ತಿ ಹೊಂದಿದ ಇವರು 2016ರಿಂದ ಇಲ್ಲಿಯವರೆಗೂ ಪೊಲೀಸ್ ತರಬೇತಿ ಶಾಲೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. 2017ರಲ್ಲಿ ಇವರಿಗೆ ಮುಖ್ಯಮಂತ್ರಿ ಪದಕವೂ ಲಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.