ಶನಿವಾರ, ನವೆಂಬರ್ 26, 2022
23 °C

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಕ್ಕಳ ದಸರಾ ಉಪ ಸಮಿತಿಯಿಂದ ಇಲ್ಲಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಮಕ್ಕಳ ದಸರೆಗೆ ಶುಕ್ರವಾರ ಅರ್ಥಪೂರ್ಣ ತೆರೆ ಬಿದ್ದಿತು.

ವೇಷಭೂಷಣ, ಪ್ರಬಂಧ, ಆಶುಭಾಷಣ, ನೃತ್ಯ ಸ್ಪರ್ಧೆಗಳು ನಡೆದವು. ಹಿರಿಯ ಪ್ರಾಥಮಿಕ ಶಾಲಾ ವಿಭಾಗದವರಿಗೆ ‘ನನ್ನ ಕನಸಿನ ಮೈಸೂರು ದಸರಾ’, ಪ್ರೌಢಶಾಲಾ ವಿಭಾಗದವರಿಗೆ ‘ಭಾರತ ಮತ್ತು ಸಾಂಸ್ಕೃತಿಕ ಪರಂಪರೆ’ ವಿಷಯದ ಮೇಲೆ ಚಿತ್ರಕಲಾ ಸ್ಪರ್ಧೆ ಜರುಗಿತು. ವಿವಿಧ ಶಾಲೆಗಳ ಮಕ್ಕಳು ತಮ್ಮ ಕಲ್ಪನೆಗಳಿಗೆ ಬಣ್ಣ ತುಂಬಿ ಬಿಳಿಯ ಕಾಗದಕ್ಕೆ ಮೆರುಗು ನೀಡಿದರು. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವಿಭಾಗದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ‘ಫ್ರೀ ಹ್ಯಾಂಡ್ ಚಿತ್ರಕಲೆ’ ಸ್ಪರ್ಧೆ ನಡೆಸಲಾಯಿತು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ, ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

‘ದಸರಾ ದರ್ಶನ’ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮೀಣ ಶಾಲೆಗಳ ಮಕ್ಕಳನ್ನು ಮೈಸೂರಿಗೆ ಕರೆ ತಂದು ಪ್ರೇಕ್ಷಣೀಯ ಸ್ಥಳಗಳ ಸಂದರ್ಶನಕ್ಕೆ ಅವಕಾಶ ಕೊಡಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರು.

ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದವರು.

ಬುಗುರಿ: (ಪ್ರಾಥಮಿಕ ಶಾಲಾ ಬಾಲಕರ ವಿಭಾಗ): ಮಹಮ್ಮದ್ ಮುಸಬ್, ಮನೋಜ್, ಚಂದನ್ ಆರ್.

ಬುಗುರಿ: (ಪ್ರೌಢಶಾಲಾ ವಿಭಾಗ): ಪ್ರೀತಂ ಎನ್‌.ವೈ., ಅಲ್ತಾಫ್‌ ಅಹಮದ್, ಶರತ್‌ ಎಸ್.

ಚೌಕಾಬಾರಾ (ಪ್ರಾಥಮಿಕ ಶಾಲಾ ವಿಭಾಗ): ಧನುಷ್ ಯು., ತೇಜಸ್, ಆದರ್ಶ.

ಚೌಕಾಬಾರಾ (ಪ್ರೌಢಶಾಲಾ ವಿಭಾಗ): ಸಾಗರ್ ಡಿ., ಶಿವು ಎ., ನಾಗಾರ್ಜುನ್ ಜೆ. ನಾಯಕ್.

ಚೌಕಾಬಾರಾ (ಪ್ರಾಥಮಿಕ ಶಾಲಾ ವಿಭಾಗ ಬಾಲಕಿಯರು): ಹಿಬಾ ಮರಿಯಮ್, ತನುಶ್ರೀ ವಿ., ಹುಸ್ಮಾ.

ಕುಂಟಬಿಲ್ಲೆ (ಪ್ರಾಥಮಿಕ ಶಾಲಾ ವಿಭಾಗ ಬಾಲಕಿಯರು): ಐಶ್ವರ್ಯಾ, ಸ್ಫೂರ್ತಿ, ಗೌತಮಿ.

ಕುಂಟಬಿಲ್ಲೆ (ಪ್ರೌಢಶಾಲಾ ವಿಭಾಗ ಬಾಲಕಿಯರು): ಅಂಬಿಕಾ ಎಂ., ವರಲಕ್ಷ್ಮಿ, ರಾಜೇಶ್ವರಿ.

ಚಿತ್ರಕಲೆ (ಪ್ರಾಥಮಿಕ ಶಾಲಾ ವಿಭಾಗ): ವೇದಾಶ್ರೀ ಎಂ., ಮೈಥಲಿ ಎಂ.ಸಿ., ಅನುಷ್ಕಾ.

ಚಿತ್ರಕಲೆ (ಪ್ರೌಢಶಾಲಾ ವಿಭಾಗ): ಎಂ.ಆರ್.ಕುಮಾರ್, ಸಿಂಚನಾ ಆರ್., ರೂಪಾ ಕೆ.

ಚಿತ್ರಕಲೆ (‍‍‍ಪ್ರಾಥಮಿಕ ಶಾಲೆ ವಿಶೇಷ ಅಗತ್ಯವುಳ್ಳ ಮಕ್ಕಳು): ಶಿವಪ್ಪ, ತೇಜಸ್, ಮಹದೇವ.

ಚಿತ್ರಕಲೆ (‍‍‍ಪ್ರೌಢಶಾಲೆ ವಿಶೇಷ ಅಗತ್ಯವುಳ್ಳ ಮಕ್ಕಳು): ಅಮೃತಾ ಎಚ್‌.ಎ., ಪವನ್‌ ಎಲ್., ಜೀವನ್ ನಾಯಕ್‌.

ಕರಕುಶಲ ಸ್ಪರ್ಧೆ: ಸಂಜನಾ ಎಂ.ತಂಡ, ಸ್ನೇಹಾ ಎಸ್. ಮತ್ತು ತಂಡ, ಲಿಖಿತ ಎಚ್‌.ಎಸ್. ಮತ್ತು ತಂಡ.

ರಸಪ್ರಶ್ನೆ (ಪ್ರಾಥಮಿಕ ಶಾಲಾ ವಿಭಾಗ): ಸ್ವಾತಿ ಮತ್ತು ವರ್ಷಿತಾ, ಸಂಜನಾ ಹಾಗೂ ರಾಜೇಶ್ವರಿ, ಅಭಿನವ ಹಾಗೂ ಲಿಖಿತ್.

ರಸಪ್ರಶ್ನೆ (ಪ್ರೌಢಶಾಲಾ ವಿಭಾಗ): ನವೀನ್ ಮತ್ತು ನಿಶಾಂತ್, ಸೃಜನ್ ಹಾಗೂ ನವನೀತ್, ಪವಿತ್ರಾ ಮತ್ತು ಹೇಮಾವತಿ.

ವಿಜ್ಞಾನ ವಸ್ತು‍ಪ್ರದರ್ಶನ (‍ಪ್ರಾಥಮಿಕ ಶಾಲೆ): ಕೆ.ಆರ್.ನಗರ ತಾಲ್ಲೂಕು ಅರಕೆರೆಯ ಮೊರಾರ್ಜಿ ದೇಸಾಯಿ ಶಾಲೆಯ ಮನ್ವಿತ್, ಈಶ್ವರ್‌, ಪಿರಿಯಾಪಟ್ಟಣ ತಾಲ್ಲೂಕು ಚನ್ನೇನಹಳ್ಳಿ ಶಾಲೆಯ ಹರ್ಷಿತಾ, ವೇದಾಕ್ಷಿ, ಗಣೇಶ್ ಮತ್ತು ಸಿದ್ದಾರ್ಥ ನಗರದ ಗೀತಾ ಭಾರತಿ ವಿದ್ಯಾಸಂಸ್ಥೆಯ ಸೈಯದ್, ಸಮೀರಾ ಹಾಗೂ ರಶ್ಮಿ.

ವಿಜ್ಞಾನ ವಸ್ತು‍ಪ್ರದರ್ಶನ (‍ಪ್ರೌಢಶಾಲೆ): ಬೀರಿಹುಂಡಿ ಸರ್ಕಾರಿ ಪ್ರೌಢಶಾಲೆಯ ಅಚ್ಯುತ ಎಂ.ಎಸ್., ಗಣಪತಿ ಸಚ್ಚಿದಾನಂದ ಪ್ರೌಢಶಾಲೆಯ ಮದನ್, ವಿಜಯ ವಿಠ್ಠಲ ವಿದ್ಯಾಶಾಲೆಯ ಭಜಂತ್ ವಿ ಮತ್ತು ಪ್ರಥಮ್ ಎಸ್.

ಸಮೂಹ ನೃತ್ಯ (ಪ್ರಾಥಮಿಕ ಶಾಲೆ): ನಿರ್ಮಲ ಹಿರಿಯ ಪ್ರಾಥಮಿಕ ಶಾಲೆಯ ಅದ್ವಿತಿ ಮತ್ತು ತಂಡ, ತಲಕಾಡಿನ ಸಮರ್ಪಣ ವಿದ್ಯಾಸಂಸ್ಥೆಯ ನಿತ್ಯಶ್ರೀ ಹಾಗೂ ಪಿರಿಯಾಪಟ್ಟಣದ ಗಿರಿಜನ ಆಶ್ರಮ ಶಾಲೆಯ ಚೈತನ್ಯ ಮತ್ತು ತಂಡ.

ಸಮೂಹ ನೃತ್ಯ (ಪ್ರೌಢಶಾಲೆ): ಬೀರಿಹುಂಡಿ ಸರ್ಕಾರಿ ಪ್ರೌಢಶಾಲೆಯ ಅಚ್ಯುತ ಎಂ.ಎಸ್., ಹುಣಸೂರು ತಾಲ್ಲೂಕು ಮನುಗನಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಅತ್ತಿಗೋಡಿನ ಸರ್ಕಾರಿ ಶಾಲೆಯ ಹೇಮಂತ್‌ಕುಮಾರ್‌ ಮತ್ತು ತಂಡ.

ವಿಶೇಷ ಅಗತ್ಯವುಳ್ಳ ಮಕ್ಕಳ ನೃತ್ಯ ಸ್ಪರ್ಧೆ: ಸಾಯಿರಂಗ ವಿದ್ಯಾಸಂಸ್ಥೆ ಹಾಗೂ ಅರುಣೋದಯ ಶಾಲೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು