ಮೈಸೂರು: ‘ಶರಣರು ಮೌಲ್ಯಯುತ ಜೀವನದಿಂದ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ’ ಎಂದು ಸಾಹಿತಿ ಎಸ್.ಪಿ. ಉಮಾದೇವಿ ಹೇಳಿದರು.
ರಾಧಾಕೃಷ್ಣನ್ ನಗರದ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ಶನಿವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತೀಯ ಪರಂಪರೆಯಲ್ಲಿ ಮೌಲ್ಯಯು ಜೀವನ ಹಾಸುಹೊಕ್ಕಾಗಿದೆ. ಆದರೆ, ನಾವು ಬದಲಾವಣೆ ಮಾಡಿಕೊಂಡು ಜೀವನದ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ವಿದ್ಯೆಯು ವಿನಯ ಹಾಗೂ ವಿವೇಕ ಹೆಚ್ಚಿಸಬೇಕು. ಬಾಲ್ಯದಲ್ಲಿ ಬೆಳೆಸಿಕೊಂಡ ಮೌಲ್ಯ ಜೀವನಪರ್ಯಂತ ಇರುತ್ತದೆ. ಹೀಗಾಗಿ, ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ ಮಾತನಾಡಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಪ್ರಾಂಶುಪಾಲರಾದ ಎಂ.ಆಶಾ ವಿತರಿಸಿದರು.