ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಘವೇಂದ್ರಸ್ವಾಮಿ ಮಧ್ಯಾರಾಧನಾ ಮಹೋತ್ಸವ

Published : 22 ಆಗಸ್ಟ್ 2024, 16:16 IST
Last Updated : 22 ಆಗಸ್ಟ್ 2024, 16:16 IST
ಫಾಲೋ ಮಾಡಿ
Comments

ನಂಜನಗೂಡು: ನಗರದ ರಾಘವೇಂದ್ರ ಸ್ವಾಮಿ ಪ್ರತೀಕ ಸನ್ನಿಧಾನದಲ್ಲಿ ರಾಘವೇಂದ್ರ ತೀರ್ಥರ 353ನೇ ವರ್ಷದ ಆರಾಧನಾ ಮಹೋತ್ಸವ ಪ್ರಯುಕ್ತ ಗುರುವಾರ ಮಧ್ಯಾರಾಧನೆ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ರಾಯರ ಪಾದಪೂಜೆ ನಡೆಸಿದ ಬಳಿಕ ಮಠದ ಒಳಾವರಣದಲ್ಲಿ ರಥೋತ್ಸವ ಜರುಗಿತು. ರಾಯರಿಗೆ ಮುಂಜಾನೆ ಪಂಚಾಮೃತ ಅಭಿಷೇಕ ನಡೆಯಿತು. ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.

ಮಠದ ಗರ್ಭಗುಡಿ ಸೇರಿದಂತೆ ಒಳಾವರಣ, ಮುಖ್ಯ ಪ್ರಾಂಗಣದಲ್ಲಿ ಮಾಡಿದ್ದ ಬಗೆಬಗೆಯ ಹೂವಿನ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು. ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿದ್ವಾನ್ ಸುಮುಖಸೂರ್ಯ ಅವರು ನಡೆಸಿಕೊಟ್ಟ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಭಕ್ತರನ್ನು ಮಂತ್ರಮುಗ್ಧಗೊಳಿಸಿತು. ವಿದ್ವಾನ್ ಕೇಶವ್ ಮೋಹನ್‍ಕುಮಾರ್ ಅವರು ನಡೆಸಿಕೊಟ್ಟ ಕರ್ನಾಟಕ ಶಾಸ್ತ್ರೀಯ ಪಿಟೀಲು ವಾದನ ಭಕ್ತರನ್ನು ಮನಸೂರೆಗೊಳಿಸಿತು. ವಿದ್ವಾನ್ ಭಾನುಸಿಂಹ ಅವರು ಬುಧವಾರ ದಾಸವಾಣಿ ನಡೆಸಿಕೊಟ್ಟರು.

ಆರಾಧನಾ ಮಹೋತ್ಸವ ಆರಂಭಕ್ಕೂ ಮುನ್ನ ಧಾನ್ಯಪೂಜೆ, ಗೋಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಗಿತ್ತು. ಗುರುವಾರ ಉತ್ತರಾಧನೆ ಅಂಗವಾಗಿ ರಥೋತ್ಸವ ನೆರವೇರಲಿದೆ. ಕಳೆದ ಮೂರು ದಿನಗಳಿಂದ ಭಕ್ತರು ಮಠಕ್ಕೆ ಸಾವಿರಾರು ಆಗಮಿಸಿ ರಾಯರ ಕೃಪೆಗೆ ಪಾತ್ರರಾದರು.

ಆ.23ರಂದು ಸುಜ್ಞಾನೇಂದ್ರತೀರ್ಥರ ಆರಾಧನೆಯೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಮಠದ ವ್ಯವಸ್ಥಾಪಕ ಕೆ.ಸುಧಾಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT