ಬುಧವಾರ, ಮಾರ್ಚ್ 22, 2023
32 °C

ಯೋಗ ಪಸರಿಸುವ ಗುರಿ: ರಾಮದಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಯೋಗ ಎಂಬ ಅತ್ಯದ್ಭುತ ಹಾಗೂ ಪರಿಣಾಮಕಾರಿ ಕಲೆಯನ್ನು ಮನೆ ಮನೆಗೆ ತೆಗೆದುಕೊಂಡು ಹೋಗುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಯೋಗ ಫೆಡರೇಷನ್ ಆಫ್ ಮೈಸೂರು ಟ್ರಸ್ಟ್ ಹಾಗೂ ಅರಮನೆ ಆಡಳಿತ ಮಂಡಳಿಯಿಂದ ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿ ರಥಸಪ್ತಮಿ ಅಂಗವಾಗಿ ಭಾನುವಾರ ಆಯೋಜಿಸಲಾಗಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೈಸೂರಿನಲ್ಲಿ ಯೋಗ ಪರಂಪರೆ ಇದೆ. ಅದನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಯೋಗದ ಮಗ್ಗಲು ಬದಲಿಸುವ ಕಾರ್ಯವನ್ನು ಮೈಸೂರು ಯೋಗ ಫೌಂಡೇಶನ್ ಹಾಗೂ ಗುರು ಶ್ರೀಹರಿ ಮತ್ತು ತಂಡ ನಿರಂತರವಾಗಿ ಮಾಡುತ್ತಾ ಬಂದಿದೆ. ಅದಕ್ಕೆ ಪೂರಕವಾಗಿ ಯೋಗ, ನ್ಯಾಚುರೋಪತಿ ಹಾಗೂ ಆಯುರ್ವೇದ ಇಲಾಖೆಗಳು ಕೈಜೋಡಿಸುತ್ತಿವೆ’ ಎಂದು ಹೇಳಿದರು.

‌‘ಇಂದು ಮಧುಮೇಹ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಅದನ್ನು ನಿಯಂತ್ರಿಸದಿದ್ದಲ್ಲಿ ಭವಿಷ್ಯದಲ್ಲಿ ದುಬಾರಿ ಬೆಲೆ ತೆರಬೇಕಾಗುತ್ತದೆ. ಆ ಕಾರಣಕ್ಕಾಗಿ ಎಲ್ಲರಿಗೂ ಯೋಗ ಅನಿವಾರ್ಯವಾಗಿದೆ’ ಎಂದರು.

‘ಮುಂಬರುವ ಯೋಗ ದಿನದಂದು ಹೆಚ್ಚಿನ ಜನರನ್ನು ಸೇರಿಸಿ ದಾಖಲೆ ಮಾಡಬೇಕು ಎಂಬ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ತಿಳಿಸಿದರು.

ಉಪ ಮೇಯರ್‌ ಡಾ.ಜಿ.ರೂಪಾ ಯೋಗೇಶ್, ಯೋಗ ಗುರು ಶ್ರೀಹರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು