ಮೈಸೂರು: ಹೊಸ ವರ್ಷಾಚರಣೆ ಪ್ರಯುಕ್ತ ದಾಖಲೆ ಮದ್ಯ ಖರೀದಿ ನಡೆದಿದ್ದು, ಡಿ.31ರಂದು ₹ 11.78 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.

ನಗರದಲ್ಲಿ 12,214 ಹಾಗೂ ಗ್ರಾಮೀಣ ಭಾಗದಲ್ಲಿ 21,097 ಮದ್ಯದ ಬಾಕ್ಸ್ಗಳು ಮಾರಾಟವಾಗಿವೆ. ಡಿ.31ರ ಸಂಜೆ 4ರಿಂದ ರಾತ್ರಿ 11ರವರೆಗೆ ಮದ್ಯದಂಗಡಿಗಳಲ್ಲಿ ವಹಿವಾಟು ಜೋರಾಗಿ ನಡೆಯಿತು. ಗ್ರಾಹಕರು ಸರದಿ ಸಾಲಿನಲ್ಲಿ ನಿಂತು ಖರೀದಿಸಿದ್ದರು.

ನಗರದಲ್ಲಿ ₹ 4.5 ಕೋಟಿ ಮೌಲ್ಯದ ಐಎಂಎಲ್, ₹ 83 ಲಕ್ಷ ಮೌಲ್ಯದ ಬಿಯರ್ ಮಾರಾಟವಾಗಿದ್ದರೆ, ಗ್ರಾಮೀಣ ಭಾಗದಲ್ಲಿ ₹ 5.83 ಕೋಟಿ ಮೌಲ್ಯದ ಐಎಂಎಲ್, ₹ 62 ಲಕ್ಷ ಬಿಯರ್ ಬಿಕರಿಯಾಗಿದೆ. ಕಳೆದ ವರ್ಷ ₹11.77 ಕೋಟಿ ಮೌಲ್ಯದ ಮದ್ಯ ಖರೀದಿಯಾಗಿತ್ತು.

ವಹಿವಾಟು ಏರಿಕೆ:

ಡಿಸೆಂಬರ್ ತಿಂಗಳಲ್ಲಿ 3,16,290 ಪೆಟ್ಟಿಗೆ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯಾಪಾರ ಶೇ 3ರಷ್ಟು ಹೆಚ್ಚಾಗಿದೆ. ₹ 159.6 ಕೋಟಿ ಐಎಂಎಲ್ ಹಾಗೂ ₹ 19.52 ಕೋಟಿ ಮೌಲ್ಯದ ಬಿಯರ್ ಮಾರಾಟವಾಗಿದ್ದು, ₹ 179.12 ಕೋಟಿ ವಹಿವಾಟು ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ₹ 36.83 ಕೋಟಿ ಹೆಚ್ಚುವರಿ ವ್ಯಾಪಾರ ನಡೆದಿದೆ.

ಗ್ರಾಮೀಣರೇ ಹೆಚ್ಚು:

ಮದ್ಯ ಖರೀದಿಯಲ್ಲೇ ಗ್ರಾಮೀಣರೇ ಮುಂದಿದ್ದಾರೆ. ನಗರದಲ್ಲಿ ₹ 591.17 ಕೋಟಿ ಐಎಂಎಲ್, ₹ 77.79 ಕೋಟಿ ಮೌಲ್ಯದ ಬಿಯರ್ ಖರೀದಿ ನಡೆದಿದ್ದರೆ, ಗ್ರಾಮೀಣರು ₹ 628.44 ಕೋಟಿ ಮೌಲ್ಯದ ಐಎಂಎಲ್, ₹ 69.32 ಕೋಟಿ ವೆಚ್ಚದ ಬಿಯರ್ ಖರೀದಿಸಿದ್ದಾರೆ.

ಕಳೆದ ವರ್ಷ ನಗರದಲ್ಲಿ ₹ 585.07 ಕೋಟಿ ಐಎಂಎಲ್, ₹ 119.27 ಕೋಟಿ ಬಿಯರ್, ಗ್ರಾಮೀಣ ವಿಭಾಗದಲ್ಲಿ ₹ 525.97 ಕೋಟಿ ಐಎಂಎಲ್, ₹ 124.17 ಕೋಟಿ ಬಿಯರ್ ಮಾರಾಟ ನಡೆದಿತ್ತು.

‘ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳ ಒಟ್ಟು ಮಾರಾಟ ₹ 179.12 ಕೋಟಿ ಆಗಿದ್ದು, ಡಿ.31ರಂದು ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಬಾಕ್ಸ್ಗಳು ಮಾರಾಟವಾಗಿವೆ. ಶೇ 3ರಷ್ಟು ವ್ಯಾಪಾರ ಹೆಚ್ಚಿದೆ’ ಎಂದು ಅಬಕಾರಿ ಇಲಾಖೆಯ ಜಿಲ್ಲೆಯ ಗ್ರಾಮೀಣ ವಿಭಾಗದ ಉಪ ಆಯುಕ್ತೆ ಮಹದೇವಿ ಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ವರ್ಷದ ಕಡೇದಿನದ ಮದ್ಯ ಮಾರಾಟ ಕಡಿಮೆಯಾಗಿದ್ದು, ವಹಿವಾಟು ಶೇ 10.98ರಷ್ಟು ಕುಸಿದಿದೆ. 5,387 ಬಾಕ್ಸ್ಗಳು ಮಾರಾಟವಾಗಿಲ್ಲ’ ಎಂದು ಇಲಾಖೆಯ ನಗರ ವಿಭಾಗದ ಉಪ ಆಯುಕ್ತ ನಾಗರಾಜಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.