ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಮೈಸೂರಿನ ಹೋಟೆಲ್‌ನಲ್ಲಿ ಮಹಜರು

Published 18 ಜೂನ್ 2024, 7:19 IST
Last Updated 18 ಜೂನ್ 2024, 7:19 IST
ಅಕ್ಷರ ಗಾತ್ರ

ಮೈಸೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ್ ಮತ್ತು 12ನೇ ಆರೋಪಿ ಲಕ್ಷ್ಮಣ್ ಅವರನ್ನು ಪೊಲೀಸರು ನಗರದ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ಗೆ ಮಂಗಳವಾರ ಕರೆತಂದು ಸ್ಥಳ ಮಹಜರು ನಡೆಸಿದರು.

ದರ್ಶನ್ ತಮ್ಮ ಹೊಸ ಚಲನಚಿತ್ರ ‘ಡೆವಿಲ್’ ಚಿತ್ರೀಕರಣಕ್ಕಾಗಿ ಸ್ನೇಹಿತರೊಂದಿಗೆ ಮೈಸೂರಿಗೆ ಆಗಮಿಸಿದ್ದರು. ಜೂನ್‌ 11ರಂದು ಬೆಳಿಗ್ಗೆ ಜಿಮ್‌ನಲ್ಲಿ ಕಸರತ್ತು ಮುಗಿಸಿ, ತಾವು ವಾಸ್ತವ್ಯವಿದ್ದ ಹೋಟೆಲ್‌ಗೆ ಬಂದಾಗ ಬೆಂಗಳೂರು ಪೊಲೀಸರು ದರ್ಶನ್ ಹಾಗೂ ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದರು.

ರೇಣುಕಸ್ವಾಮಿ ಕೊಲೆ ಘಟನೆಯ ಬಳಿಕ ದರ್ಶನ್ ಹಾಗೂ ಸ್ನೇಹಿತರು ಮೈಸೂರಿನಲ್ಲಿ ಬಂದು ವಾಸ್ತವ್ಯ ಹೂಡಿದ್ದು, ಪ್ರಕರಣದಿಂದ ಬಚಾವಾಗಲು ₹30 ಲಕ್ಷ ನೀಡಲು ಇಲ್ಲಿಯೇ ಮಾತುಕತೆ ನಡೆದಿತ್ತು‌ ಎನ್ನಲಾಗಿದೆ.

ಪೊಲೀಸರು ಮಹಜರು ಸಮಯದಲ್ಲಿ ಅಂದಿನ ಚಟುವಟಿಕೆ ಬಗ್ಗೆ ಆರೋಪಿಗಳಿಂದ ಮಾಹಿತಿ ಪಡೆದರು. ದರ್ಶನ್‌ರನ್ನು ಸಹ ಮಹಜರು ಸ್ಥಳಕ್ಕೆ ಕರೆತರಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು ಎನ್ನುವ ಕಾರಣಕ್ಕೆ ಅವರನ್ನು ಕರೆತರಲಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT