ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟರಿ ಕ್ರೀಡಾಕೂಟ: ಹುಣಸೂರಿಗೆ 10 ಬಹುಮಾನ

Published 11 ಡಿಸೆಂಬರ್ 2023, 14:27 IST
Last Updated 11 ಡಿಸೆಂಬರ್ 2023, 14:27 IST
ಅಕ್ಷರ ಗಾತ್ರ

ಹುಣಸೂರು: ಜಿಲ್ಲಾ ರೋಟರಿ ಸಂಸ್ಥೆಯು ಮೂಡಬಿದ್ರೆಯಲ್ಲಿ ಆಯೋಜಿಸಿದ್ದ ಎರಡು ದಿನದ ರೋಟರಿ ಜಿಲ್ಲಾ ಕ್ರೀಡಾಕೂಟದಲ್ಲಿ ಹುಣಸೂರು ರೋಟರಿ ಸಂಸ್ಥೆಗೆ 10 ಬಹುಮಾನಗಳು ಲಭಿಸಿದೆ ಎಂದು ನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಚೆನ್ನಕೇಶವ ತಿಳಿಸಿದ್ದಾರೆ.

ಈ ಕೂಟದಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳಿಂದ ರೋಟರಿ ಸದಸ್ಯರು ಭಾಗವಹಿಸಿದ್ದು, ಕೂಟದಲ್ಲಿ ಹುಣಸೂರು ರೋಟರಿಗೆ ಕೇರಂ ಡಬಲ್ಸ್ ಪ್ರಥಮ, ಬ್ಯಾಡ್ಮಿಂಟನ್ 50 ವರ್ಷ ಮೇಲ್ಟಟ್ಟವರ ಡಬಲ್ಸ್ ಪ್ರಥಮ, ಬ್ಯಾಡ್ಮಿಂಟನ್ 50 ವರ್ಷ ಸಿಂಗಲ್ಸ್ ದ್ವಿತೀಯ, ಅಥ್ಲೆಟಿಕ್ಸ್ ವಿಭಾಗದಲ್ಲಿ 400 ಮೀಟರ್‌ ಸ್ಲೋ ವಾಕ್ಕಿಂಗ್ ತೃತೀಯ, 100 ಮೀಟರ್‌ ದ್ವಿತೀಯ, 200 ಮೀಟರ್‌ ದ್ವಿತೀಯ, 400 ಮೀಟರ್‌ ದ್ವಿತೀಯ, 400 ಮೀಟರ್‌ ಸ್ಲೋ ವಾಕ್ಕಿಂಗ್ ತೃತೀಯ, 400 ಮೀಟರ್‌ ರಿಲೇ ಪ್ರಥಮ ಪಡೆಯುವ ಮೂಲಕ ಕೂಟದಲ್ಲಿ 4 ನೇ ಸ್ಥಾನ ಪಡೆದುಕೊಂಡಿತು ಎಂದು ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ಡಾ.ರಘು, ಡಾ.ರವಿ, ಮಂಜುನಾಥ್, ಸಿದ್ದೇಶ್ವರ, ಚೆನ್ನಕೇಶವ ಮತ್ತು ಪ್ರಸನ್ನ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT